ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂದೋಲನ ಈಗಷ್ಟೇ ಪ್ರಾರಂಭವಾಗಿದೆ: ಡೊನಾಲ್ಡ್ ಟ್ರಂಪ್

Last Updated 14 ಫೆಬ್ರುವರಿ 2021, 2:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಾಗ್ದಂಡನೆಯಿಂದ ಖುಲಾಸೆಗೊಳಿಸಿರುವ ಅಮೆರಿಕ ಸೆನೆಟ್ ನಿರ್ಣಯವನ್ನು ಸ್ವಾಗತಿಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಂದೋಲನ ಇದೀಗಷ್ಟೇ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡ ಮೇಲೆ ಜನವರಿ 6ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುಲಾಸೆಗೊಳಿಸಿ ಯುಎಸ್ ಸೆನೆಟ್ ತೀರ್ಪು ನೀಡಿದೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಟ್ರಂಪ್, ಅಮೆರಿಕದ ಯಾವುದೇ ಅಧ್ಯಕ್ಷರೂ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದು ಹೇಳಿದರು.

ಅಮೆರಿಕವನ್ನು ಶ್ರೇಷ್ಠವಾಗಿಸುವ ಐತಿಹಾಸಿಕ, ದೇಶಭಕ್ತಿಯಿಂದ ಕೂಡಿದ ಮತ್ತು ಸುಂದರ ಆಂದೋಲನವು ಇದೀಗಷ್ಟೇ ಪ್ರಾರಂಭವಾಗಿದೆ ಎಂದು ತಿಳಿಸಿದರು.

ವಾಗ್ದಂಡನೆ ವಿಚಾರಣೆಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬೇಟೆ ಎಂದು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದ ಯಾವುದೇ ಅಧ್ಯಕ್ಷರು ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಕ್ಕಿಲ್ಲ ಮತ್ತು ಇದು ಮುಂದುವರಿಯುತ್ತಿದೆ. ಏಕೆಂದರೆ ನಮ್ಮ ವಿರೋಧಿಗಳು 75 ಮಿಲಿಯನ್ ಜನರನ್ನು ಮರೆಯಲು ಸಾಧ್ಯವಿಲ್ಲ. ಕೆಲವು ತಿಂಗಳುಗಳ ಹಿಂದೆಯಷ್ಟೇ ಅವರೆಲ್ಲರು ನಮಗಾಗಿ ಮತ ಹಾಕಿದ್ದಾರೆ ಎಂದು ಹೇಳಿದರು.

ಮೊದಲನೆಯದಾಗಿ ನಾನು ನ್ಯಾಯವನ್ನು ಎತ್ತಿ ಹಿಡಿಯಲು ಸತ್ಯಕ್ಕಾಗಿ ನನಗಾಗಿ ದುಡಿದ ವಕೀಲರು ಹಾಗೂ ಇತರರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. ನಾವೆಲ್ಲರೂ ಆರಾಧಿಸುವ ಸಂವಿಧಾನಕ್ಕಾಗಿ ದೇಶದ ಹೃದಯ ಭಾಗದಲ್ಲಿರುವ ಪವಿತ್ರ ಕಾನೂನು ತತ್ವಗಳನ್ನು ಎತ್ತಿ ಹಿಡಿದಿರುವ ಅಮೆರಿಕ ಸೆನೆಟ್‌ನ ಎಲ್ಲ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆಯ ಚಾಂಪಿಯನ್ ಎಂದು ತಮ್ಮನ್ನು ತಾವೇ ಬಿಂಬಿಸಿರುವ ಟ್ರಂಪ್, ಅಮೆರಿಕದ ಒಂದು ರಾಜಕೀಯ ಪಕ್ಷಕ್ಕೆ ಕಾನೂನು ನಿಯಮವನ್ನು ಖಂಡಿಸಲು ಅಧಿಕಾರ ನೀಡಲಾಗಿರುವುದು ವಿಷಾದನೀಯ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನಾನು ನಿಮ್ಮೊಂದಿಗೆ ಅನೇಕ ವಿಚಾರಗಳ್ನು ಹಂಚಿಕೊಳ್ಳಲು ಬಯಸುತ್ತೇನೆ. ಅಮೆರಿಕದ ಉನ್ನತಿ ಸಾಧಿಸಲು ಅದ್ಭುತ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸಲು ಬಯಸುತ್ತಿದ್ದೇನೆ. ಇದಕ್ಕಿಂತ ಮಿಗಿಲಾಗಿ ಬೇರೆ ಏನೂ ಇಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT