ವಾಗ್ದಂಡನೆ ನಿರ್ಣಯ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುಲಾಸೆ

ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ಜನವರಿ 6ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುಲಾಸೆಗೊಳಿಸಿ ಯುಎಸ್ ಸೆನೆಟ್ ತೀರ್ಪು ನೀಡಿದೆ.
ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಲಾದ ವಾಗ್ದಂಡನೆ ನಿರ್ಣಯದ ಬಗ್ಗೆ ನಾಲ್ಕು ದಿನಗಳ ವಿಚಾರಣೆಯ ಬಳಿಕ ಅಮೆರಿಕದ 100 ಸದಸ್ಯರ ಸೆನೆಟ್, ಟ್ರಂಪ್ ಅವರನ್ನು 57-43 ಮತಗಳಿಂದ ವಾಗ್ದಂಡನೆ ಮಾಡಲು ಮತ ಚಲಾಯಿಸಿದರು. ವಾಗ್ದಂಡನೆ ನಿರ್ಣಯ ಮಂಡಿಸಲು ಬೇಕಾದ ಮೂರನೇ ಎರಡರಷ್ಟರಲ್ಲಿ 10 ಮತಗಳ ಅಭಾವ ಕಂಡುಬಂದಿತ್ತು.
ಜನವರಿ 6ರಂದು ದಂಗೆಯೆದ್ದಿದ್ದ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿತ್ತು. ಡೊನಾಲ್ಡ್ ಟ್ರಂಪ್ ಅವರ ಮೇಲೆ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪವನ್ನು ಹೊರಿಸಲಾಗಿತ್ತು.
ಏಳು ರಿಪಬ್ಲಿಕನ್ ಸೆನೆಟರ್‌ಗಳು ವಾಗ್ದಂಡನೆ ಮಾಡುವ ವಿರುದ್ಧ ಮತ ಚಲಾಯಿಸಿದರೂ, ಸೆನೆಟ್‌ನಲ್ಲಿ 50 ಸದಸ್ಯರನ್ನು ಹೊಂದಿರುವ ಡೆಮಾಕ್ರಾಟ್‌ಗಳು ಮಾಜಿ ಅಧ್ಯಕ್ಷರನ್ನು ವಾಗ್ದಂಡನೆ ಮಾಡಲು ಅಗತ್ಯವಾದ ಮೂರನೇ ಎರಡರಷ್ಟು ಅಥವಾ 67 ಮತಗಳನ್ನು ಪಡೆಯುವಲ್ಲಿ ವಿಫಲವಾಯಿತು.
ಇದನ್ನೂ ಓದಿ: ಟ್ರಂಪ್ ವಿರುದ್ಧ ವಾಗ್ದಂಡನೆ: ವಾರಾಂತ್ಯದಲ್ಲಿ ತೀರ್ಪು ಬರುವ ಸಾಧ್ಯತೆ
ಎರಡು ಬಾರಿ ವಾಗ್ದಂಡನೆ ಎದುರಿಸುತ್ತಿರುವ ಮೊದಲ ಅಧ್ಯಕ್ಷ ಹಾಗೂ ಅಧ್ಯಕ್ಷ ಹುದ್ದೆ ತ್ಯಜಿಸಿದ ಬಳಿಕವೂ ವಾಗ್ದಂಡನೆ ಎದುರಿಸುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್ ಟ್ರಂಪ್ ಒಳಗಾಗಿದ್ದಾರೆ.
ವಾಗ್ದಂಡನೆಯಿಂದ ಖುಲಾಸೆಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಆಂದೋಲನ ಇದೀಗಷ್ಟೇ ಪ್ರಾರಂಭವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.