ಭಾನುವಾರ, ನವೆಂಬರ್ 27, 2022
27 °C

ಗ್ರೀಸ್‌: ದೋಣಿ ಮುಳುಗಿ 21 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಕಿತೀರಾ (ಗ್ರೀಸ್‌): ಗ್ರೀಕ್‌ ದ್ವೀಪದ ಬಳಿ ವಲಸಿಗರಿದ್ದ ಎರಡು ದೋಣಿಗಳು ಮುಳುಗಡೆಯಾಗಿ 21 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಲೆಸ್ಬೋಸ್‌ನ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಗ್ರೀಕ್‌ ದ್ವೀಪದ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದಿದ್ದಾರೆ.

ವಲಸಿಗರು ಸಂಚರಿಸುತ್ತಿದ್ದ ದೋಣಿಗಳು ಬಂಡೆಗಳಿಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿವೆ. ಈ ವೇಳೆ ದೋಣಿಯಲ್ಲಿದ್ದ ಕೆಲವರು ಬಂಡೆಯನ್ನು ಹತ್ತಿ  ಮೇಲೆ ಬಂದಿದ್ದಾರೆ. ಇವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದೂ ಹೇಳಿದ್ದಾರೆ.

ಇರಾನ್‌, ಇರಾಕ್‌ ಮತ್ತು ಅಫ್ಗಾನಿಸ್ತಾನದ 80 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಆಫ್ರಿಕಾದ 16 ಮಂದಿ ಯುವತಿಯರ ಮತ್ತು ಒಬ್ಬ ಯುವಕನ ಮೃತದೇಹಗಳು ಲೆಸ್ಬೋಸ್‌ ಬಳಿ ಪತ್ತೆಯಾಗಿವೆ. 11 ಮಂದಿ ನಾಪತ್ತೆಯಾಗಿದ್ದಾರೆ ಎಂದೂ ವಿವರಿಸಿದ್ದಾರೆ.

‘ಟರ್ಕಿಯೆಯ ಮಾನವ ಕಳ್ಳಸಾಗಣೆ ನಡೆಸುವ ಗ್ಯಾಂಗ್‌ಗಳು ನಿರ್ದಯವಾಗಿ ದೋಣಿಗಳಲ್ಲಿ ವಲಸಿಗರನ್ನು ಕಿಕ್ಕಿರಿದು ತುಂಬಿ ಕರೆದೊಯ್ಯುವ ಪರಿಣಾಮ ಹಲವರು ಜೀವ ಕಳೆದುಕೊಂಡಿದ್ದಾರೆ’ ಎಂದು ಗ್ರೀಸ್‌ನ ನೌಕಾಯಾನ ಸಚಿವ ಯಾನ್ನಿಸ್ ಪ್ಲಾಕಿಯೋಟಾಕಿಸ್ ಆರೋಪಿಸಿದ್ದಾರೆ.

ಯಾನ್ನಿಸ್‌ ಅವರ ಈ ಆರೋಪವನ್ನು ಟರ್ಕಿಯೆ ತಳ್ಳಿ ಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು