ಭಾನುವಾರ, ಸೆಪ್ಟೆಂಬರ್ 25, 2022
22 °C

ರಷ್ಯಾ ನೌಕಾಪಡೆ ಕೇಂದ್ರ ಕಚೇರಿ ಮೇಲೆ ಡ್ರೋನ್‌ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೀವ್‌: ರಷ್ಯಾದ ಕಪ್ಪು ಸಮುದ್ರದ ನೌಕಾಪಡೆಯ ಕೇಂದ್ರ ಕಚೇರಿ ಮೇಲೆ ಭಾನುವಾರ ಡ್ರೋನ್‌ ಮೂಲಕ ಕಡಿಮೆ ತೀವ್ರತೆಯ ಸ್ಫೋಟಕದಿಂದ ದಾಳಿ ನಡೆದಿದ್ದು, ಆರು ಜನರು ಗಾಯಗೊಂಡಿದ್ದಾರೆ.

2014ರಲ್ಲಿ ರಷ್ಯಾ ಆಕ್ರಮಿಸಿದ ಕ್ರಿಮಿಯಾ ದ್ವೀಪಕಲ್ಪದ ಸೆವಸ್ಟೊಪೋಲ್‌ ನಗರದಲ್ಲಿರುವ ನೌಕಾಪಡೆ ಕೇಂದ್ರ ಕಚೇರಿ ಮೇಲೆ ದಾಳಿಯಾಗಿದೆ. ಇದರಿಂದಾಗಿ ರಷ್ಯಾ ನೌಕಾ ಪಡೆಯ ರಜೆ ದಿನ ರದ್ದು ಮಾಡಲಾಗಿದೆ.

ಸ್ಥಳೀಯವಾಗಿ ತಯಾರಿಸಿರುವ ಡ್ರೋನ್‌ ಇದು. ಕಡಿಮೆ ತೀವ್ರತೆಯ ಸ್ಫೋಟಕ ಇದರಲ್ಲಿತ್ತು ಎಂದು ನೌಕಾಪಡೆಯ ಪತ್ರಿಕಾ ಶಾಖೆ ಮಾಹಿತಿ ನೀಡಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿರುವುದನ್ನು ಸೆವಸ್ಟೊಪೋಲ್‌ ಮೇಯರ್‌ ಮಿಖಾಯಿಲ್‌ ರಜ್ವೊಜಾಯೆವ್‌ ಖಚಿತಪಡಿಸಿದ್ದಾರೆ.  

ಉಕ್ರೇನಿನ ಹಲವು ಕಡೆಗಳಲ್ಲಿ ಸೇನಾ ಘರ್ಷಣೆ ಮುಂದುವರಿದಿದೆ. ರಷ್ಯಾದ ಶೆಲ್‌ ದಾಳಿಯಿಂದ ಶಾಲೆ ಮತ್ತು ಹೋಟೆಲ್‌ ಕಟ್ಟಡಗಳು ಹಾನಿಗೀಡಾಗಿವೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಮೈಕೊಲೈವ್‌ ನಗರದ ಮೇಯರ್‌ ವಿಟಾಲಿ ಕಿಮ್‌ ತಿಳಿಸಿದ್ದಾರೆ.

ಸುಮಿ ಪ್ರಾಂತ್ಯದಲ್ಲೂ ರಷ್ಯಾದ ಗಡಿಗೆ ಸಮೀಪದಲ್ಲಿ ಶೆಲ್‌ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಡೊನೆಟ್‌ಸ್ಕ್‌ ಪ್ರಾಂತ್ಯದಲ್ಲಿ ಶನಿವಾರ ನಡೆದ ದಾಳಿಯಲ್ಲಿ ಮೂವರು ನಾಗರಿಕರು ಹತರಾಗಿದ್ದಾರೆ. ಈ ಪ್ರದೇಶ ರಷ್ಯಾ ಪ್ರತ್ಯೇಕತಾವಾದಿ ಪಡೆಗಳ ನಿಯಂತ್ರಣದಲ್ಲಿದೆ ಎಂದು ಗವರ್ನರ್ ಪಾವ್ಲೋ ಕಿರಿಲೆಂಕೊ ಹೇಳಿದ್ದಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು