ಬುಧವಾರ, ಮಾರ್ಚ್ 22, 2023
33 °C

ಇರಾನ್‌ನಲ್ಲಿ ಭೂಕಂಪ: 3 ಸಾವು, 800 ಮಂದಿಗೆ ಗಾಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೆಹರಾನ್‌ : ಇರಾನ್‌ನ ವಾಯವ್ಯ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ 5.9 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ ಹಾಗೂ 800 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಭೂಕಂಪನದಿಂದಾಗಿ ಮನೆಗಳು, ಕಟ್ಟಡಗಳು ಹಾಗೂ ವಾಹನಗಳು ನಾಶಗೊಂಡಿವೆ. ನೂರಾರು ಜನರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.‌

‘ಪಶ್ಚಿಮ ಅಜರ್‌ಬೈಜಾನ್‌ ಪ್ರಾಂತ್ಯದ 2 ಲಕ್ಷ ಜನಸಂಖ್ಯೆ ಹೊಂದಿರುವ ಖೋಯ್‌ ನಗರದಲ್ಲಿ ಈ ಭೂಕಂಪನ ಸಂಭವಿಸಿತು’ ಎಂದು ಟೆಹರಾನ್‌ ವಿಶ್ವವಿದ್ಯಾಲಯದ ಭೂಕಂಪಶಾಸ್ತ್ರ ವಿಭಾಗ ತಿಳಿಸಿದೆ.

ಪಾಕಿಸ್ತಾನದ ಹಲವು ಪ್ರದೇಶಗಳಲ್ಲೂ ರಿಕ್ಟರ್‌ ಮಾಪಕದಲ್ಲಿ 6.3 ತೀವ್ರತೆಯ ಕಂಪನದ ಅನುಭವವಾಗಿದ್ದು, ಪಂಜಾಬ್‌ ಪ್ರಾಂತ್ಯದ ಅಟ್ಟೋಕ್‌ ಸಮೀಪ ಕಂಪನದ  ಕೇಂದ್ರ ಬಿಂದು ಇತ್ತು ಎಂದು ಯುರೋಪಿಯನ್‌ ಮೆಡಿಟರೇನಿಯನ್‌ ಸಿಸ್ಮೊಲಾಜಿಕಲ್‌ ಸೆಂಟರ್‌ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು