ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಲ್ಲಿ ಉಷ್ಣಗಾಳಿ: ರೆಡ್‌ ಅಲರ್ಟ್‌ ಘೋಷಣೆ

ಸೋಮವಾರ, ಮಂಗಳವಾರ 40 ಡಿಗ್ರಿ ಸೆ. ವರೆಗೆ ತಾಪಮಾನ ಏರಿಕೆ ಸಾಧ್ಯತೆ
Last Updated 15 ಜುಲೈ 2022, 14:39 IST
ಅಕ್ಷರ ಗಾತ್ರ

ಲಂಡನ್‌ : ಮುಂದಿನ ಸೋಮವಾರ ಮತ್ತು ಮಂಗಳವಾರ ಲಂಡನ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಾರಿ ಉಷ್ಣಗಾಳಿ ಬೀಸಲಿದೆ ಎಂದು ಬ್ರಿಟನ್‌ ಹವಾಮಾನ ಇಲಾಖೆ ಇದೇ ಮೊದಲ ಬಾರಿಗೆ ಶುಕ್ರವಾರ ರೆಡ್‌ ಅಲರ್ಟ್‌ ಘೋಷಿಸಿದೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದೆ. ಮುಂದಿನವಾರ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಇದು ಜೀವಸಂಕುಲಕ್ಕೆ ಅಪಾಯಕಾರಿಯಾಗಬಹುದು ಎಂದು ತಿಳಿಸಿದೆ.

ಬ್ರಿಟನ್‌ ರಾಷ್ಟ್ರೀಯ ಹವಾಮಾನ ಸೇವೆ ಸಹ, ಉಷ್ಣ ನಿಯಂತ್ರಕ ವ್ಯವಸ್ಥೆಗಳು ಮತ್ತು ಸಾಧನಗಳು ಹಾನಿಗೊಳಗಾಗಬಹುದು. ಇದರಿಂದ ಕೆಲವೆಡೆ ವಿದ್ಯುತ್‌ ಮತ್ತು ನೀರು, ಮೊಬೈಲ್‌ ಫೋನ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT