ಬೆಂಗಳೂರು: ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ.

ಜಪಾನ್ನಲ್ಲಿ ನಡೆಯಲಿರುವ ಮೇಲ್ಮನೆ ಚುನಾವಣೆ ಸಂಬಂಧ ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದ ಅಬೆ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ.

ಭಾಷಣ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದಿದ್ದ ವ್ಯಕ್ತಿ ಅಬೆ ಅವರನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದಾನೆ. ಬಳಿಕ ಓಡಿ ಹೋಗಲು ಯತ್ನಿಸಿದ್ದು, ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಗುಂಡು ಹಾರಿಸಿರುವ ವ್ಯಕ್ತಿ ಸುಮಾರು 40 ವರ್ಷದವನಾಗಿದ್ದು, ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಆತ ಸ್ವ–ರಕ್ಷಣಾ ಪಡೆಯ ಮಾಜಿ ಸದಸ್ಯ ಎಂದು ಜಪಾನ್ನ ಫ್ಯೂಜಿ ಟಿವಿ ವರದಿ ಮಾಡಿದೆ.

ದೀರ್ಘ ಅವಧಿಗೆ ಜಪಾನ್ನ ಪ್ರಧಾನಿಯಾಗಿದ್ದ ಶಿಂಜೊ ಅಬೆಗೆ ಗುಂಡೇಟು: ಸಾವಿನ ಅನುಮಾನ

ಅಬೆ ಅವರಿಗೆ ಗಂಭೀರ ಸ್ವರೂಪ ಗಾಯಗಳಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಜಪಾನ್ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.