ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಚೀನಾದಲ್ಲಿ ಬಿರುಗಾಳಿ: 11 ಸಾವು, 102 ಮಂದಿಗೆ ಗಾಯ

Last Updated 1 ಮೇ 2021, 9:58 IST
ಅಕ್ಷರ ಗಾತ್ರ

ಬೀಜಿಂಗ್‌: ಪೂರ್ವ ಚೀನಾದಲ್ಲಿರುವ ನಾಂಟೊಂಗ್‌ ನಗರದಲ್ಲಿ ಬೀಸಿದ ತೀವ್ರ ಬಿರುಗಾಳಿಯಿಂದಾಗಿ ಕಟ್ಟಡಗಳು ಕುಸಿದು, ಮರಗಳು ಉರುಳಿದ ಪರಿಣಾಮ, 11 ಮಂದಿ ಸಾವನ್ನಪ್ಪಿದ್ದು, 102 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

‌ಚೀನಾದ ಪೂರ್ವ ಪ್ರಾಂತ್ಯ ಜಿಯಾಂಗ್ಸುವಿನಲ್ಲಿರುವ ನಾಂಟೊಂಗ್ ನಗರದಲ್ಲಿ ಶುಕ್ರವಾರ ರಾತ್ರಿ ತೀವ್ರವಾಗಿ ಹವಾಮಾನ ಏರುಪೇರಾದ ಪರಿಣಾಮ, ಯಾಂಗ್ಜಿ ನದಿಮುಖಜ ಭೂಮಿ ಮುಳುಗಡೆಯಾಗಿ, ಈ ಅನಾಹುತ ಸಂಭವಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಈ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿ ಸಿಲುಕಿದ್ದ 3,050 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.

ಗಂಟೆಗೆ 162 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದರಿಂದ ಮೀನುಗಾರರ ದೋಣಿಗಳು ಉರುಳಿದವು. ಘಟನೆಯಲ್ಲಿ ಇಬ್ಬರು ನಾವಿಕರನ್ನು ರಕ್ಷಿಸಲಾಗಿದೆ. ಉಳಿದ ಒಂಬತ್ತು ಸಿಬ್ಬಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT