ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂಡಮಾರುತ: ಮೈಕ್‌ಗೆ ಹಾನಿಯಾಗದಂತೆ ಕಾಂಡೋಮ್ ಸುತ್ತಿ ವರದಿ ಮಾಡಿದ TV ವರದಿಗಾರ್ತಿ!

Last Updated 29 ಸೆಪ್ಟೆಂಬರ್ 2022, 4:50 IST
ಅಕ್ಷರ ಗಾತ್ರ

ಫ್ಲಾರಿಡಾ: ಅಮೆರಿಕದ ಫ್ಲಾರಿಡಾದ ಪಶ್ಚಿಮ ಕರಾವಳಿಗೆ ಹರಿಕೇನ್ ಚಂಡಮಾರುತ ಅಪ್ಪಳಿಸಿದ್ದು ಭಾರಿ ಗಾಳಿ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಸಾವು–ನೋವು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.

ಇದೇ ವೇಳೆ ಫ್ಲಾರಿಡಾದ ‘ಪೋರ್ಟ್ ಮೇರ್ಸ್ ಬೀಚ್’ ಬಳಿ ಚಂಡಮಾರುತದ ಬಗ್ಗೆ ವರದಿ ಮಾಡುತ್ತಿದ್ದ ಎನ್‌ಬಿಸಿ2 ಟಿವಿ ವರದಿಗಾರ್ತಿಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಿವಿ ಮೈಕ್ ಹಿಡಿದುಕೊಂಡು ವರದಿ ಮಾಡುತ್ತಿದ್ದ ಕೀಲಾ ಗೇಲರ್ ಎನ್ನುವ ವರದಿಗಾರ್ತಿಯ ಮೈಕ್‌ನ್ನು ಆ್ಯಂಕರ್ ಸೇರಿದಂತೆ ಲೈವ್ ಕಾಸ್ಟ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ.

ಇದಕ್ಕೆ ಲೈವ್ ವೇಳೆಯೇ ನೇರವಾಗಿ ಉತ್ತರ ಕೊಟ್ಟ ಕೀಲಾ, ‘ಹೌದು ನೀವು ಕೇಳುವ ಪ್ರಶ್ನೆ ಹಾಗೂ ಅನುಮಾನ ಸರಿ ಇದೆ. ನಾನು ನನ್ನ ಟಿವಿ ಮೈಕ್ರೋಫೊನ್‌ನನ್ನು ಈ ಹಾಳಾದ ಚಂಡಮಾರುತದ ಗಾಳಿ ಮಳೆಯಿಂದ ಕಾಪಾಡಲು ಕಾಂಡೋಮ್ ಸುತ್ತಿದ್ದೇನೆ. ವಾಟರ್‌ಪ್ರೂಪ್ ಮೈಕ್ ನನ್ನದು’ ಎಂದು ತಮಾಷೆಯಾಗಿಹೇಳಿದ್ದಾರೆ. ನೆಟ್ಟಿಗರು ಇವರೊಬ್ಬರ ಜಾಣೆ ಪತ್ರಕರ್ತೆ ಎಂದು ಕೊಂಡಾಡಿದ್ದಾರೆ.

ಇನ್ನುಫ್ಲಾರಿಡಾದಲ್ಲಿಹರಿಕೇನ್ ಚಂಡಮಾರುತ ವ್ಯಾಪಕ ಅನಾಹುತವನ್ನು ಸೃಷ್ಟಿಸಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಗಂಟೆಗೆ ಗಾಳಿ 120 ಕಿಮೀಗೂ ಅಧಿಕವಾಗಿ ಬೀಸುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಇಬ್ಬರು ಈ ಚಂಡಮಾರುತದಲ್ಲಿ ಸತ್ತಿದ್ದಾರೆ. 20ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.ಗಾಳಿ ಮಳೆಯ ರಭಸಕ್ಕೆ ಮನೆಗಳು ತೇಲಿಕೊಂಡು ಹೋಗುತ್ತಿವೆ.

ಗಂಟೆಗೆ ಕನಿಷ್ಠ 120 ಕಿಮೀ ಅಧಿಕವಾಗಿ ಬೀಸುವ ಚಂಡಮಾರುತವನ್ನು ಹರಿಕೇನ್ ಚಂಡಮಾರುತ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT