ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಹಿಂದೂ ರಾಷ್ಟ್ರವಾದ ಹೆಚ್ಚುತ್ತಿದೆ: ಮಾಜಿ ಉಪರಾಷ್ಟ್ರಪತಿ ಅನ್ಸಾರಿ ಕಳವಳ

‘ಇಂಡಿಯನ್‌ ಅಮೆರಿಕನ್ ಮುಸ್ಲಿಂ ಕೌನ್ಸಿಲ್‌ನಿಂದ ಸಂವಾದ ಕಾರ್ಯಕ್ರಮ
Last Updated 27 ಜನವರಿ 2022, 11:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಭಾರತದಲ್ಲಿ ಹಿಂದೂ ರಾಷ್ಟ್ರವಾದ ಕುರಿತ ಒಲವು ಹೆಚ್ಚುತ್ತಿರುವುದು ಕಳವಳಕಾರಿ ಎಂದುಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹೇಳಿದ್ದಾರೆ.

‘ಇಂಡಿಯನ್‌ ಅಮೆರಿಕನ್ ಮುಸ್ಲಿಂ ಕೌನ್ಸಿಲ್’ ವರ್ಚುವಲ್‌ ಆಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿನ ಮಾನವ ಹಕ್ಕುಗಳ ಸ್ಥಿತಿಯೂ ಕಳವಳಕರಿಯಾಗಿದೆ ಎಂದು ಅನ್ಸಾರಿ ಹೇಳಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ನಾಲ್ವರು ಸಂಸದರು ಸಹ ಈ ಮಾತಿಗೆ ದನಿಗೂಡಿಸಿದ್ದಾರೆ.

‘ಭಾರತದಲ್ಲಿ ನಾಗರಿಕ ರಾಷ್ಟ್ರವಾದಕ್ಕೆ ವ್ಯತಿರಿಕ್ತವಾದ ಹೊಸ ಹಾಗೂ ತೋರಿಕೆಯ ಸಾಂಸ್ಕೃತಿಕ ರಾಷ್ಟ್ರವಾದ ಅನುಸರಿಸುವ ಪ್ರವೃತ್ತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇಂಥ ಸಾಂಸ್ಕೃತಿಕ ರಾಷ್ಟ್ರವಾದವು ಜನರನ್ನು ಧರ್ಮ, ಮತಗಳ ಆಧಾರದಲ್ಲಿ ವಿಂಗಡಿಸುತ್ತದೆ’ ಎಂದು ಅನ್ಸಾರಿ ಹೇಳಿದ್ದಾರೆ.

‘ಅಸಹಿಷ್ಣುತೆ, ಪರಕೀಯ ಭಾವನೆ ಮೂಡಿಸುವ ಜೊತೆಗೆ ಅಶಾಂತಿ ಹಾಗೂ ಅಭದ್ರ ಭಾವನೆಗೂ ಈ ಬೆಳವಣಿಗೆ ಕಾರಣವಾಗುತ್ತಿದೆ’ ಎಂದು ಹೇಳಿದ್ದಾರೆ ಎಂದು ‘ಇಂಡಿಯನ್‌ ಅಮೆರಿಕನ್ ಮುಸ್ಲಿಂ ಕೌನ್ಸಿಲ್’ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಅಲ್ಪಸಂಖ್ಯಾತರ ನಂಬಿಕೆಗಳನ್ನೇ ಗುರಿಯಾಗಿಸುವುದನ್ನು ಭಾರತ ಸರ್ಕಾರ ಮುಂದುವರಿಸಿದೆ. ಇದರಿಂದಾಗಿ ದೇಶದಲ್ಲಿ ತಾರತಮ್ಯ ಹಾಗೂ ಹಿಂಸಾಕೃತ್ಯಗಳಿಗೆ ನೀರೆರೆಯುವಂತಹ ವಾತಾವರಣ ನಿರ್ಮಾಣವಾಗುತ್ತಿದೆ’ ಡೆಮಾಕ್ರಟಿಕ್ ಸಂಸದ ಈದ್ ಮರ್ಕಿ ಹೇಳಿದ್ದಾರೆ.

ಯಾವಾಗಲೂ ಭಾರತ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುವ ಇತಿಹಾಸ ಹೊಂದಿರುವ ಈದ್‌ ಮರ್ಕಿ, ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿನ ಭಾರತ–ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೂ ವಿರೋಧ ವ್ಯಕ್ತಪಡಿಸಿದ್ದರು.

ಸಂಸದರಾದ ಜಿಮ್‌ ಮ್ಯಾಕ್‌ಗವರ್ನ್, ಆ್ಯಂಡಿ ಲೆವಿನ್‌ ಹಾಗೂ ಜೇಮಿ ರಸ್ಕಿನ್‌ ಸಹ ಮಾತನಾಡಿದರು. ಭಾರತದಲ್ಲಿ ಯಾವುದೇ ಸರ್ಕಾರದ ಆಡಳಿತ ಇದ್ದರೂ ಈ ಮೂವರು ಸಂಸದರು ಕೂಡ ಭಾರತ ವಿರೋಧಿ ನಿಲುವುಗಳನ್ನೇ ತೆಗೆದುಕೊಳ್ಳುತ್ತಾರೆ ಎಂಬುದು ಗಮನಾರ್ಹ.

ಆರೋಪಗಳನ್ನು ತಳ್ಳಿ ಹಾಕಿದ ಭಾರತ

ವಿದೇಶ ಸರ್ಕಾರಗಳು ಹಾಗೂ ಮಾನವ ಹಕ್ಕಗಳು ಗುಂಪುಗಳು ಮಾಡಿರುವ ಈ ಆರೋಪ ಹಾಗೂ ಟೀಕೆಗಳನ್ನು ಭಾರತ ತಳ್ಳಿಹಾಕಿದೆ.‘ಭಾರತ ಪ್ರಜಾತಾಂತ್ರಿಕ ಮೌಲ್ಯಗಳನ್ನೇ ಅನುಸರಿಸುತ್ತದೆ. ದೇಶದ ಎಲ್ಲ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಂಬಂಧ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಸಂಸ್ಥೆಗಳನ್ನು ಹೊಂದಿದೆ’ ಎಂದು ಭಾರತ ಸರ್ಕಾರ ತಿರುಗೇಟು ನೀಡಿದೆ.ಭಾರತದ ಸಂವಿಧಾನವು ಎಲ್ಲ ನಾಗರಿಕರ ಸುರಕ್ಷತೆಗೆ ಒತ್ತು ನೀಡುತ್ತದೆ. ಮಾನವ ಹಕ್ಕುಗಳ ರಕ್ಷಣೆಯನ್ನೂ ಖಾತರಿಪಡಿಸುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT