ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬಿರಿಯಾದಲ್ಲಿ ವಿಮಾನ ಅಪಘಾತ: ನಾಲ್ವರ ಸಾವು

Last Updated 19 ಜೂನ್ 2021, 13:31 IST
ಅಕ್ಷರ ಗಾತ್ರ

ಮಾಸ್ಕೋ: ಸೈಬೀರಿಯಾದಲ್ಲಿ ಪ್ಯಾರಾಚ್ಯೂಟರ್‌ಗಳನ್ನು ಕರೆದೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬೀರಿಯಾ ಪ್ರದೇಶದ ಕುಜ್ಬಾಸ್ ಎಂದು ಕರೆಯಲ್ಪಡುವ ಕೆಮೆರೊವೊದ ತನಯ್ ವಾಯುನೆಲೆಯಲ್ಲಿ ತರಬೇತಿ ಹಾರಾಟದ ಸಮಯದಲ್ಲಿ 19 ಜನರನ್ನು ಹೊತ್ತ ಎಲ್ -410 ವಿಮಾನ ಸ್ಥಳೀಯ ಕಾಲಮಾನ 10 ಗಂಟೆಯಲ್ಲಿ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಒಂದು ಎಂಜಿನ್‌ನ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದುಸ್ಥಳೀಯ ಪ್ರಾಸಿಕ್ಯೂಟರ್ ಕಚೇರಿಯ ಮಾಹಿತಿ ಉಲ್ಲೇಖಿಸಿ ಟಾಸ್ ಸುದ್ದಿ ಸಂಸ್ಥೆ ಹೇಳಿದೆ.

ವಿಮಾನದಲ್ಲಿದ್ದ 19 ಜನರಲ್ಲಿ ನಾಲ್ವರು ಮೃತಪಟ್ಟಿದ್ದಾರೆ, ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಉಳಿದ 11 ಮಂದಿ ಗಾಯಗೊಂಡಿದ್ದಾರೆ ಎಂದು ಕೆಮೆರೊವೊ ಪ್ರಾದೇಶಿಕ ಗವರ್ನರ್ ಸೆರ್ಗೆಯ್ ಸಿವಿಲಿಯೋವ್ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಸಂಚಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ವಾಯು ಸಾರಿಗೆಯ ಕಾರ್ಯಾಚರಣೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ರಷ್ಯಾದಲ್ಲಿ ಪ್ರಮುಖ ಅಪರಾಧಗಳನ್ನು ತನಿಖೆ ಮಾಡುವ ತನಿಖಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT