ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಭದ್ರತಾ ನೆಲೆ ಮೇಲೆ ಉಗ್ರರ ದಾಳಿ: ನಾಲ್ವರು ಸೈನಿಕರ ಹತ್ಯೆ

Last Updated 12 ಫೆಬ್ರುವರಿ 2021, 10:42 IST
ಅಕ್ಷರ ಗಾತ್ರ

ಪೆಶಾವರ: ಹಿಂದೆ ತಾಲಿಬಾನ್‌ ಹಿಡಿತದಲ್ಲಿದ್ದ ಈಶಾನ್ಯ ಪಾಕಿಸ್ತಾನದ ಬುಡಕಟ್ಟು ಜಿಲ್ಲೆಯಲ್ಲಿದ್ದ ಭದ್ರತಾ ನೆಲೆಯ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಸೈನಿಕರು ಸೇರಿದಂತೆ ಹಲವು ದಾಳಿಕೋರರು ಸಾವನ್ನಪ್ಪಿದ್ದಾರೆ.

ಅಫ್ಗಾನಿಸ್ತಾನದ ಗಡಿಭಾಗದ ದಕ್ಷಿಣ ವಾಜಿರಿಸ್ತಾನ್ ಜಿಲ್ಲೆಯಲ್ಲಿರುವ ಮಕೀನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಉಗ್ರರ ಗುಂಡಿನ ದಾಳಿಗೆ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.

‘ದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ನಾಲ್ವರು ಉಗ್ರರು ಸತ್ತಿದ್ದಾರೆ‘ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ. ಖೈಬರ್ ಪಕ್ತುನ್ಕ್ವಾ ಪ್ರಾಂತ್ಯದ ರಾಜ್ಯಪಾಲ ಶಾ ಫರ್ಮಾನ್‌ ಅವರು ದಾಳಿಯನ್ನು ಖಂಡಿಸಿದ್ದಾರೆ.

ಇಲ್ಲಿವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT