ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಭೀಕರ ಬರಗಾಲ ಎದುರಿಸುತ್ತಿದೆ: ಪ್ರಧಾನಿ ಎಲಿಜಬೆತ್‌

Last Updated 5 ಆಗಸ್ಟ್ 2022, 14:53 IST
ಅಕ್ಷರ ಗಾತ್ರ

ಪ್ಯಾರಿಸ್: ‘ಫ್ರಾನ್ಸ್ ದೇಶವು ಈ ಬಾರಿ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ’ ಎಂದು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ ಎಚ್ಚರಿಸಿದ್ದು, ಇದರ ನಿರ್ವಹಣೆಗೆ ಸರ್ಕಾರಿ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಕ್ರಿಯಗೊಳಿಸುವುದಾಗಿ ತಿಳಿಸಿದ್ದಾರೆ.

‘ಈ ವರ್ಷದ ಬೇಸಿಗೆಯ ವೇಳೆ ಫ್ರಾನ್ಸ್‌ನಲ್ಲಿ ಮೂರನೇ ಬಾರಿಗೆ ಬಿಸಿಗಾಳಿಯ ಅಲೆ ಮುಂದುವರಿದಿದ್ದು, ದೇಶದ ಅನೇಕ ಪ್ರದೇಶಗಳು ಬರಪೀಡಿತವಾಗಿವೆ. ಅನೇಕ ಪ್ರದೇಶಗಳು ನೀರಿನಿಂದ ವಂಚಿತವಾಗಿವೆ. ಇದರಿಂದ ನಮ್ಮ ರೈತರು, ನಮ್ಮ ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯತೆ ತೊಂದರೆಗೀಡಾಗಿವೆ’ ಎಂದು ಬೋರ್ನ್ ಶುಕ್ರವಾರ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT