ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ 20 ವರ್ಷದ ಬಳಿಕ ಜೈಲಿನಿಂದ ಬಿಡುಗಡೆ

Last Updated 23 ಡಿಸೆಂಬರ್ 2022, 7:22 IST
ಅಕ್ಷರ ಗಾತ್ರ

ಕಠ್ಮಂಡು: ಏಷ್ಯಾದ್ಯಂತ 1970ರಲ್ಲಿ ನಡುಕ ಹುಟ್ಟಿಸಿದ್ದ ಫ್ರೆಂಚ್‌ ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ನನ್ನು ಶುಕ್ರವಾರ ನೇಪಾಳದ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

78 ವರ್ಷದ ಶೋಭರಾಜ್‌ನನ್ನು ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶ ಹೊರಡಿಸಿತ್ತು.

ಇಬ್ಬರು ಉತ್ತರ ಅಮೆರಿಕ ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪದಲ್ಲಿ 2003ರಿಂದ ಈತ ಇಲ್ಲಿನ ಜೈಲಿನಲ್ಲಿ ಇದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ನ್ಯಾಯಾಲಯ ಇದೀಗ ಆದೇಶ ನೀಡಿತ್ತು.

ನಕಲಿ ಪಾಸ್‌ಪಾರ್ಟ್‌ ಬಳಸಿ ನೇಪಾಳಕ್ಕೆ ಬಂದಿದ್ದ ಶೋಭರಾಜ್ 1975ರಲ್ಲಿ ಅಮೆರಿಕ ಹಾಗೂ ಕೆನಡಾ ಮೊಲದ ಇಬ್ಬರು ಪ್ರವಾಸಿಗರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶೋಭರಾಜ್‌ಗೆ ನೇಪಾಳ ಸುಪ್ರೀಂ ಕೋರ್ಟ್‌ ದೋಷಿ ಎಂದು ಗುರುತಿಸಿ ಶಿಕ್ಷೆ ವಿಧಿಸಿತ್ತು.

ಹತ್ಯೆ ಮಾಡಿದ್ದಕ್ಕೆ 20 ವರ್ಷ ಜೈಲು ಹಾಗೂ ನಕಲಿ ಪಾಸ್‌ಪೋರ್ಟ್‌ ಬಳಸಿದ್ದಕ್ಕೆ 1 ವರ್ಷ ಜೈಲು ವಿಧಿಸಿತ್ತು.

ಶೋಭರಾಜ್‌ ಬಿಡುಗಡೆ ಮಾಡಿದ ಬಳಿಕ ಆತನನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರ್ಟ್‌ ನೇಪಾಳ ಸರ್ಕಾರಕ್ಕೆ ಆದೇಶ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT