ಶುಕ್ರವಾರ, ಅಕ್ಟೋಬರ್ 7, 2022
24 °C
ನಾಸಾ ಯೋಜನೆಗೆ ಮತ್ತೊಮ್ಮೆ ವಿಘ್ನ

ನಾಸಾ ಚಂದ್ರಯಾನ: ಇಂಧನ ಸೋರಿಕೆ– ವಿಳಂಬಗೊಂಡ ರಾಕೆಟ್‌ ಉಡಾವಣೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೇಪ್‌ ಕ್ಯಾನವೆರಲ್‌: ಚಂದಿರನ ಅಂಗಳಕ್ಕೆ ಮನುಷ್ಯನನ್ನು ಪುನಃ ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಮಹತ್ವಾಕಾಂಕ್ಷೆ ಯೋಜನೆಗೆ ಶನಿವಾರ ಮತ್ತೊಮ್ಮೆ ಅಡ್ಡಿ ಎದುರಾಯಿತು.

ಉಡಾವಣೆಗೆ ಸಜ್ಜಾಗಿದ್ದ 322 ಅಡಿ ಉದ್ದದ ರಾಕೆಟ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇಂಧನ ಸೋರಿಕೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ನಾಸಾ ತಿಳಿಸಿದೆ.

ಎಂಜಿನಿಯರ್‌ಗಳು ದೋಷವನ್ನು ಸರಿಪಡಿಸಿದ ನಂತರ, ಎರಡು ಗಂಟೆ ತಡವಾಗಿ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು.

ಸೋಮವಾರ ಕೂಡ ಇಂಧನ ಸೋರಿಕೆ ಮತ್ತು ಎಂಜಿನ್‌ನಲ್ಲಿ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ರಾಕೆಟ್‌ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು