ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ರಿಷಿ ಸುನಕ್‌ಗೆ 10 ಡೌನಿಂಗ್ ಸ್ಟ್ರೀಟ್‌ ಮುಂದೆ ಕರತಾಡನದ ಅದ್ಧೂರಿ ಸ್ವಾಗತ

Last Updated 24 ಅಕ್ಟೋಬರ್ 2022, 16:03 IST
ಅಕ್ಷರ ಗಾತ್ರ

ಲಂಡನ್:ಬ್ರಿಟನ್ ರಾಜಕಾರಣಿ ಹಾಗೂ ಭಾರತಮೂಲದ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿ ಪ್ರಧಾನ ಮಂತ್ರಿಯವರ ಅಧಿಕೃತ ಕಚೇರಿಯಾದ ಲಂಡನ್‌ನ 10 ಡೌನಿಂಗ್‌ ಸ್ಟ್ರೀಟ್‌ನ ಮುಂದೆ ರಿಷಿ ಬೆಂಬಲಿಗರು ಅದ್ಧೂರಿ ಕರತಾಡನದ ಮೂಲಕ ಸ್ವಾಗತಿಸಿದರು.

ರಿಷಿ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಖುಷಿಯಿಂದ ಒಳನಡೆದರು.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್‌ಗೆ ಇದೀಗ ಇದೆ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಡಳಿತ ಮುನ್ನಡೆಸುವಂತಾಗಿದೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯರಾಗಿದ್ದಾರೆ. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಅವರಿಗೆ ಬದಲಾದ ಬೆಳವಣಿಗೆಯಲ್ಲಿ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಬ್ರಿಟನ್‌ನ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದರು.

ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ.

ದೊಡ್ಡ ಸವಾಲಿನ ಸಮಯದಲ್ಲಿ ನಾವು ಒಗ್ಗೂಡಬೇಕು.ನಮ್ಮ ಮುಂದಿನ ಪ್ರಧಾನಿಯಾಗಲು ನಮ್ಮ ಸಂಸದೀಯ ಪಕ್ಷದ ಬಹುಪಾಲು ಬೆಂಬಲ ರಿಷಿ ಸುನಕ್ ಅವರಿಗೆ ಇದೆ ಎಂಬುದು ಸ್ಪಷ್ಟವಾಗಿದೆ.ಅವರು ಅದಕ್ಕಾಗಿ ಅಗತ್ಯವಾದ ಪರಿಣತಿ ಮತ್ತು ಅನುಭವವನ್ನು ಹೊಂದಿದ್ದಾರೆ ಎಂದು ಕನ್ಸರ್ವೇಟಿವ್ ಪಾರ್ಟಿ ನಿಕಟಪೂರ್ವ ಅಧ್ಯಕ್ಷ ಬ್ರಾಂಡನ್ ಲೇವಿಸ್ ಟ್ವೀಟ್ ಮಾಡಿದ್ದರು.

ಬೋರಿಸ್ ಜಾನ್ಸನ್ ತಾವು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪುನರಾಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಿಷಿ ಸುನಕ್ ಅವರ ದಾರಿ ಸುಗಮವಾಗಿತ್ತು.

ಸೋಮವಾರ ಸಂಜೆ ರಿಷಿ ಸುನಕ್ ಅವರ ಅಧಿಕೃತ ಆಯ್ಕೆಬಗ್ಗೆ ಪ್ರಕಟಣೆ ಹೊರಬೀದ್ದಿತು. ರಿಷಿ ಸುನಕ್ ಅವರುಅ.28 ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT