ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಸಾವಿನ ಸಂಖ್ಯೆ ಎರಡಂಕಿ ದಾಟಿಸಿದ ಗುಂಡಿನ ದಾಳಿಗಳು   

ಅಮೆರಿಕದ ಶಾಲೆಯಲ್ಲಿ ವಿದ್ಯಾರ್ಥಿಗಳ ಹತ್ಯಾಕಾಂಡಕ್ಕೆ ಬೈಡನ್‌ ಭಾವುಕ ಪ್ರತಿಕ್ರಿಯೆ; ಬಂದೂಕು ಕಾನೂನು ಬದಲಿಸುವ ವಾಗ್ದಾನ
Last Updated 25 ಮೇ 2022, 17:25 IST
ಅಕ್ಷರ ಗಾತ್ರ

ಹ್ಯೂಸ್ಟನ್: ಅಮೆರಿಕದಲ್ಲಿ ವಿದ್ಯಾರ್ಥಿಗಳು ಬಂದೂಕಿನಿಂದ ದಾಳಿ ಮಾಡಿ ಸಾಮೂಹಿಕ ಹತ್ಯಾಕಾಂಡ ನಡೆಸುತ್ತಿರುವ ಘಟನೆಗಳು ಮರುಕಳಿ ಸುತ್ತಲೇ ಇವೆ. ಟೆಕ್ಸಾಸ್‌ನ ಉವಾಲ್ಡೆಯ ರಾಬ್‌ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಈಗ ಮತ್ತೊಮ್ಮೆ ಜಗತ್ತನ್ನು ಬೆಚ್ಚಿಬೀಳಿಸಿದೆ.

ಉವಾಲ್ಡೆಯ ಘಟನೆ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ನಡೆದ ಅತ್ಯಂತ ಭಯಾನಕ ಘಟನೆ ಎನಿಸಿದೆ. ಘಟನೆಯ ಬಗ್ಗೆ ಭಾವುಕವಾಗಿ
ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ದೇಶದಲ್ಲಿನ ಬಂದೂಕು ಲಾಬಿಗೆ ಮತ್ತು ಮುಗ್ಧರ ಸಾಮೂಹಿಕ ಹತ್ಯೆಗೆ ಇತಿಶ್ರೀ ಹಾಡುವ ಸಂಕಲ್ಪ ಮಾಡಿದ್ದಾರೆ. ಅಮೇರಿಕದಲ್ಲಿ ಇಲ್ಲಿಯವರೆಗೆ ನಡೆದ ಹತ್ಯಾಕಾಂಡ ಘಟನೆಗಳ ಇಣುಕು ನೋಟ ಇಲ್ಲಿದೆ.

ಸಾಂಟಾ ಫೇ ಹೈಸ್ಕೂಲ್, ಮೇ 2018: ಹ್ಯೂಸ್ಟನ್ ಪ್ರೌಢಶಾಲೆಯಲ್ಲಿ 17 ವರ್ಷದ ಯುವಕನ ಗುಂಡಿನ ದಾಳಿಗೆ 10 ಮಂದಿ ಬಲಿ. ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು.

ಮಾರ್ಜೋರಿ ಸ್ಟೋನ್‌ಮ್ಯಾನ್ ಡೌಗ್ಲಾಸ್ ಹೈಸ್ಕೂಲ್, ಫೆಬ್ರುವರಿ 2018: ಫ್ಲಾರಿಡಾದ ಪಾರ್ಕ್‌ಲ್ಯಾಂಡ್‌ನ ಶಾಲೆಯಲ್ಲಿ 20 ವರ್ಷದ ಯುವಕನ ಗುಂಡಿನ ದಾಳಿಯಲ್ಲಿ 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿ ಸಾವು. ಹಲವರಿಗೆ ಗಾಯ.

ಯುಎಂಪಿಕ್ಯುಯುಎಕಮ್ಯುನಿಟಿ ಕಾಲೇಜು, ಅಕ್ಟೋಬರ್ 2015: ಒರೆಗಾನ್‌ನ ರೋಸ್‌ಬರ್ಗ್‌ನಲ್ಲಿನ ಶಾಲೆಯಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ, ಒಂಬತ್ತು ಮಂದಿ ಕೊಂದು, ಇತರ ಒಂಬತ್ತು ಮಂದಿ ಗಾಯಗೊಳಿಸಿ, ನಂತರ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆ, ಡಿಸೆಂಬರ್ 2012: ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ತನ್ನ ಮನೆಯಲ್ಲಿ 19 ವರ್ಷದ ಯುವಕ ತನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದ. ನಂತರ ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆಗೆ ನುಗ್ಗಿ 20 ವಿದ್ಯಾರ್ಥಿಗಳು, ಆರು ಶಿಕ್ಷಕರನ್ನು ಕೊಂದು, ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಕೊಲಂಬೈನ್ ಹೈಸ್ಕೂಲ್, ಏಪ್ರಿಲ್ 1999: ಕೊಲೊರಾಡೋದ ಲಿಟಲ್‌ಟನ್‌ನ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ತಮ್ಮ 12 ಗೆಳೆಯರನ್ನು ಮತ್ತು ಒಬ್ಬ ಶಿಕ್ಷಕರನ್ನು ಹತ್ಯೆ ಮಾಡಿ, ಹಲವರನ್ನು ಗಾಯಗೊಳಿಸಿ, ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಅಜ್ಜಿಗೂ ಗುಂಡು ಹಾರಿಸಿದ ಹಂತಕ
ಉವಾಲ್ಡೆ, ಅಮೆರಿಕ
: ಟೆಕ್ಸಾಸ್‌ನ ರಾಬ್‌ ಪ್ರಾಥಮಿಕ ಶಾಲೆಯಲ್ಲಿ 19 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದ ಹಂತಕರಾಮೋಸ್‌, ಶಾಲೆಗೆ ನುಗ್ಗುವ ಮೊದಲು ತನ್ನ ಅಜ್ಜಿಯ ಮೇಲೆ ಗುಂಡು ಹಾರಿಸಿ ಬಂದಿದ್ದಾನೆ ಎಂದುಟೆಕ್ಸಾಸ್‌ನ ಸಾರ್ವಜನಿಕ ಸುರಕ್ಷೆ ಇಲಾಖೆಯ (ಡಿಪಿಎಸ್) ಅಧಿಕಾರಿಗಳು ‘ಸಿಎನ್‌ಎನ್‌’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶಾಲೆಯ ನಾಲ್ಕನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ಮುಂದಾದ ಶಿಕ್ಷಕಿ ಇವಾ ಮಿರೆಲ್ಸ್ ಮೇಲೂ ಗುಂಡು ಹಾರಿಸಿದ್ದಾನೆ ಎಂದು ಮೃತ ಶಿಕ್ಷಕಿಯ ಚಿಕ್ಕಮ್ಮ ಲಿಡಿಯಾ ಮಾರ್ಟಿನೆಜ್ ಡೆಲ್ಗಾಡೊ ‘ನ್ಯೂಯಾರ್ಕ್ ಟೈಮ್ಸ್‌ಗೆ’ ತಿಳಿಸಿದರು.

ವೆಂಡಿಸ್ ಔಟ್‌ಲೆಟ್‌ನಲ್ಲಿ ಉದ್ಯೋಗ ಪಡೆಯುವ ಮೊದಲು ರಾಮೋಸ್‌, ಉವಾಲ್ಡೆ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದ. ಈತ 18 ವರ್ಷ ತುಂಬಿದ ನಂತರ ಖರೀದಿಸಿದ ಬಂದೂಕನ್ನು ಹತ್ಯಾಕಾಂಡಕ್ಕೆ ಬಳಸಿದ್ದಾನೆ ಎಂದುಪೊಲೀಸರು ಹೇಳಿದ್ದಾರೆ.18 ವರ್ಷ ಮೇಲ್ಪಟ್ಟವರು ಬಂದೂಕು ಖರೀದಿಸಲುಅಮೆರಿಕದಲ್ಲಿ ಕಾನೂನು ಅವಕಾಶ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT