ಶನಿವಾರ, ಸೆಪ್ಟೆಂಬರ್ 19, 2020
22 °C

ಎಚ್‌–1ಬಿ ವೀಸಾ ಉಳ್ಳವರ ಅಮೆರಿಕ ಪ್ರಯಾಣಕ್ಕೆ ಷರತ್ತುಬದ್ಧ ಅನುಮತಿ

ಎಎನ್‌ಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಹೊಂದಿರುವವರು ಅಮೆರಿಕ ಪ್ರವೇಶಿಸಲು ಟ್ರಂಪ್‌ ಸರ್ಕಾರ ಗುರುವಾರ ಷರತ್ತು ಬದ್ಧ ಅನುಮತಿ ನೀಡಿದೆ. ಇದಕ್ಕಾಗಿ ವೀಸಾ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಲಾಗಿದೆ.

ಎಚ್‌–1ಬಿ ವೀಸಾ ಹೊಂದಿದ್ದ ಉದ್ಯೋಗಿ, ವೀಸಾ ನಿಷೇಧದ ಘೋಷಣೆಗೆ ಮುಂಚಿತವಾಗಿ ತಾನು ಮಾಡುತ್ತಿದ್ದ ಉದ್ಯೋಗಕ್ಕೇ ಮರಳುವಂತಿದ್ದರೆ ಅವರು ಅಮೆರಿಕ ಪ್ರವೇಶಿಸಬಹುದು ಎಂದು ಅಮೆರಿಕ ಸರ್ಕಾರ ಹೇಳಿದೆ.

‘ಈ ಹಿಂದಿನ ಕಂಪೆನಿಯ ಅದೇ ಉದ್ಯೋಗ ಪ್ರಾರಂಭಿಸಲು ಬಯಸುವವರು ಅದೇ ವೀಸಾ ವರ್ಗೀಕರಣದೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಬಹುದು. ಪ್ರಾಥಮಿಕ ವೀಸಾ ಹೊಂದಿರುವವರೊಂದಿಗೆ ಅವಲಂಬಿತರೂ (ಸಂಗಾತಿ ಮತ್ತು ಮಕ್ಕಳು) ಅಮೆರಿಕಕ್ಕೆ ಬರಲು ಅವಕಾಶ ನೀಡಲಾಗುವುದು’ ಎಂದು ರಾಷ್ಟ್ರೀಯ ಸಲಹಾ ಇಲಾಖೆ ತಿಳಿಸಿದೆ.

ಅಮೆರಿಕದ ತ್ವರಿತ ಮತ್ತು ಮುಂದುವರಿದ ಆರ್ಥಿಕ ಪುನಶ್ಚೇತನಕ್ಕೆ ಅನುಕೂಲವಾಗುವ ಅಗತ್ಯಗಳನ್ನು ಪೂರೈಸಬಲ್ಲ ತಜ್ಞರು, ಹಿರಿಯ ವ್ಯವಸ್ಥಾಪಕರು ಮತ್ತು ಎಚ್-1ಬಿ ವೀಸಾಗಳನ್ನು ಹೊಂದಿರುವ ಇತರ ಕಾರ್ಮಿಕರ ಪ್ರಯಾಣಕ್ಕೂ ಸರ್ಕಾರ ಅನುಮತಿ ನೀಡಿದೆ.

ಜೂನ್‌ 22ರಂದು ಆದೇಶ ಹೊರಡಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಚ್-1ಬಿ ಉದ್ಯೋಗದ ವೀಸಾ ವಿತರಿಸುವುದನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು