ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ವರ್ಡ್‌ ವಿವಿ ವಿದ್ಯಾರ್ಥಿ ಸಂಘಕ್ಕೆ ಮೊದಲ ಕಪ್ಪು ವರ್ಣದ ಅಧ್ಯಕ್ಷ

Last Updated 25 ನವೆಂಬರ್ 2020, 6:48 IST
ಅಕ್ಷರ ಗಾತ್ರ

ಮಿಸ್ಸಿಸ್ಸಿಪ್ಪಿ: ಇದೇ ಮೊದಲ ಬಾರಿಗೆ ಕಪ್ಪು ವರ್ಣದ ವಿದ್ಯಾರ್ಥಿಯೊಬ್ಬರು ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಹ್ಯಾಟ್ಟಿಸ್‌ಬರ್ಗ್‌ನ 20 ವರ್ಷದ ನೊಹಾ ಹ್ಯಾರಿಸ್‌, ಹಾರ್ವರ್ಡ್ ವಿ.ವಿಯ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊದಲ ಕಪ್ಪು ವರ್ಣೀಯ. ನವೆಂಬರ್ 12ರಂದು ನಡೆದ ಚುನಾವಣೆಯಲ್ಲಿ ಸದಸ್ಯರೆಲ್ಲ ಸೇರಿ ನೋವಾ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು 'ಹ್ಯಾಟ್ಟಿಸ್‌ಬರ್ಗ್‌ ಅಮೆರಿಕನ್‌' ಮಾಧ್ಯಮ ವರದಿ ಮಾಡಿದೆ.

ಈ ಹಿಂದೆ ಹಾರ್ವರ್ಡ್‌ ವಿಶ್ವವಿದ್ಯಾಲಯದ ಇಬ್ಬರು ಕಪ್ಪು ವರ್ಣದ ವಿದ್ಯಾರ್ಥಿಗಳು ಹಾರ್ವರ್ಡ್ ಪದವಿಪೂರ್ವ ಮಂಡಳಿಯ ಪ್ರಮುಖರಾಗಿದ್ದರು. ಆದರೆ ಹ್ಯಾರಿಸ್ ವಿದ್ಯಾರ್ಥಿ ಸಂಘದಿಂದ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ. 'ಈ ಗೌರವವನ್ನು ಲಘುವಾಗಿ ಪರಿಗಣಿಸುವುದಿಲ್ಲ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಶ್ರಮಿಸುವುದಾಗಿ' ಹ್ಯಾರಿಸ್ ಪತ್ರಿಕೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT