ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಸಿಎಸ್ಎಸ್‌ ಪರೀಕ್ಷೆ ಪಾಸ್ ಮಾಡಿದ ಹಿಂದೂ ಮಹಿಳೆ

Last Updated 8 ಮೇ 2021, 7:50 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಹಿಂದೂ ಮಹಿಳೆಯೊಬ್ಬರು ದೇಶದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಪಾಕಿಸ್ತಾನ ಆಡಳಿತ ಸೇವೆಗಳಿಗೆ (ಪಿಎಎಸ್) ಆಯ್ಕೆಯಾಗಿದ್ದಾರೆ.

ಸಿಎಸ್ಎಸ್ ಪರೀಕ್ಷೆ ಪಾಸ್ ಮಾಡಿರುವ ವೈದ್ಯೆ ಸನಾ ರಾಮಚಂದ್ ಪಾಕಿಸ್ತಾನದಲ್ಲಿ ಈ ಸಾಧನೆ ಮಾಡಿದ ಮೊದಲ ಹಿಂದೂ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸನಾ, ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಸಿಂಧ್ ಪ್ರಾಂತ್ಯದ ಶಿಕಾರ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದವರಾಗಿದ್ದಾರೆ.

ಲಿಖಿತ ಪರೀಕ್ಷೆಗೆ ಹಾಜರಾದ 18,553 ಜನರ ಪೈಕಿ ಸಿಎಸ್ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ 221 ಅಭ್ಯರ್ಥಿಗಳಲ್ಲಿ ಸನಾ ಕೂಡ ಒಬ್ಬರು. ವಿಸ್ತಾರವಾದ ವೈದ್ಯಕೀಯ, ಮಾನಸಿಕ ಮತ್ತು ಮೌಖಿಕ ಪರೀಕ್ಷೆಗಳ ನಂತರ ಅಂತಿಮ ಆಯ್ಕೆ ಮಾಡಲಾಗಿದೆ.

ಫಲಿತಾಂಶದ ನಂತರ, ಸನಾ ರಾಮ ಚಂದ್ ಅವರು, ‘ವಹೇಗುರು ಜಿ ಕಾ ಖಲ್ಸಾ ವಹೇಗುರು ಜಿ ಕಿ ಫತೇಹ್’ ಎಂದು ಟ್ವೀಟ್ ಮಾಡಿದ್ದಾರೆ. ‘ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ ನಾನು ಸಿಎಸ್ಎಸ್ 2020 ಅನ್ನು ಪೂರ್ಣಗೊಳಿಸಿದ್ದೇನೆ. ಪಿಎಎಸ್‌ ಹುದ್ದೇಗೆ ನೇಮಕವಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ. ಇದರ ಎಲ್ಲಾ ಕ್ರೆಡಿಟ್ ನನ್ನ ಹೆತ್ತವರಿಗೆ ಹೋಗುತ್ತದೆ.’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT