ಲಂಡನ್: 2020ರ ನವೆಂಬರ್ನಲ್ಲಿಕೋವಿಡ್ ನಿಯಮ ಉಲ್ಲಂಘಿಸಿ, ಡೌನಿಂಗ್ ಸ್ಟ್ರೀಟ್ನಲ್ಲಿ ನಡೆದ ಔತಣ ಕೂಟದಲ್ಲಿಮದ್ಯ ಸೇವಿಸುತ್ತಿರುವ ಚಿತ್ರಗಳು ಬಿಡುಗಡೆಯಾದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಜನರಲ್ಲಿ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ.

ಹಿರಿಯ ಸರ್ಕಾರಿ ಅಧಿಕಾರಿ ಸು ಗ್ರೇ ಅವರು ಪ್ರಧಾನಿ ಬೋರಿಸ್ ಅವರ ಈ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದರು. ‘ಬ್ರಿಟನ್ನಿನ ಸರ್ಕಾರಿ ಕಚೇರಿಗಳ ನಿಯಮ ಉಲ್ಲಂಘನೆಯ ಸಂಸ್ಕೃತಿಯಿಂದ ನಾಯಕತ್ವದಲ್ಲಿ ವೈಫಲ್ಯಗಳು ಉಂಟಾಗುತ್ತವೆ’ ಎಂದು ಅವರು ಖಂಡಿಸಿದ್ದರು.

ಗ್ರೇ ಅವರ ವರದಿಗಳು ಪ್ರಕಟವಾದ ಬೆನ್ನಲ್ಲೇ, ಬೋರಿಸ್ ಅವರು ಸಂಸದರ ಸಭೆಯಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೋರಿ, ನಡೆದ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.