ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ಗೆ ಕಾಲಾವಕಾಶ ನೀಡಬೇಕು, ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ: ಇಮ್ರಾನ್

Last Updated 16 ಸೆಪ್ಟೆಂಬರ್ 2021, 1:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ‘ನಾವು ಅವರನ್ನು (ತಾಲಿಬಾನಿಗಳನ್ನು) ನಿಯಂತ್ರಿಸಬಹುದು’ ಎಂದು ಯೋಚಿಸುವ ಬದಲು, ಅಫ್ಗಾನಿಸ್ತಾನವನ್ನು ಉತ್ತೇಜಿಸುವುದರ ಜತೆಗೆ ತಾಲಿಬಾನಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲು ಜಗತ್ತು ಮುಂದಾಗಬೇಕು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ತಾಲಿಬಾನಿಗಳನ್ನು ನಿಯಂತ್ರಿಸಲು ಅಮೆರಿಕ ಮತ್ತು ಪಾಕಿಸ್ತಾನದಿಂದ ಸಾಧ್ಯವಿಲ್ಲ. ಅಫ್ಗಾನಿಸ್ತಾನದ ಜನರು ಯಾವುದೇ ಕೈಗೊಂಬೆ ಸರ್ಕಾರವನ್ನು ಬೆಂಬಲಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿರುವುದಾಗಿ ‘ಹಿಂದೂಸ್ತಾನ್‌ ಟೈಮ್‌’ ವರದಿ ಮಾಡಿದೆ.

‘ತಾಲಿಬಾನಿಗಳಿಗೆ ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿಂದ ಯುಎಸ್ ಸೇನಾ ಪಡೆಗಳು ವಾಪಸ್‌ ಹೋದ ಬಳಿಕ ರಕ್ತಪಾತವಾಗುತ್ತದೆ ಎಂದು ಪಾಕಿಸ್ತಾನವು ಗುಪ್ತಚರ ಮಾಹಿತಿಗಳನ್ನು ಹೊಂದಿತ್ತು’ ಎಂದಿದ್ದಾರೆ.

‘ಸದ್ಯ ಜಗತ್ತು ತಾಲಿಬಾನ್‌ಗೆ ಕಾನೂನುಬದ್ಧ ಸರ್ಕಾರವನ್ನು ರಚಿಸಲು ಮತ್ತು ಅಲ್ಲಿನ ಜನರ ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕು’ ಎಂದು ಖಾನ್ ಹೇಳಿದ್ದಾರೆ.

ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್ ಖಾನ್, ‘ಹೊರಗಿನವರಿಂದ ಅಫ್ಗನ್‌ ಮಹಿಳೆಯವರಿಗೆ ಹಕ್ಕುಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಭಾವಿಸುವುದು ತಪ್ಪು. ಅಲ್ಲಿನ ಸರ್ಕಾರ ಈಗಷ್ಟೇ ರಚನೆಯಾಗಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಖಂಡಿತ ಪಡೆಯಲಿದ್ದಾರೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT