ವಾಷಿಂಗ್ಟನ್: ಕ್ಷಿಪ್ರಗತಿಯಲ್ಲಿ ಚಲಿಸುವ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಇಲ್ಲಿನ ಸ್ವತಂತ್ರ ಅಧ್ಯಯನ ವರದಿಯೊಂದು ತಿಳಿಸಿದೆ.

ಚೀನಾವು ಇತ್ತೀಚಿಗೆ ಅಣುಶಕ್ತಿ ಸಾಮರ್ಥ್ಯದ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ ಎಂದು ವರದಿ ಆಗಿದ್ದು, ಇದು, ಅಮೆರಿಕ ಗುಪ್ತದಳಕ್ಕೂ ಆಶ್ಚರ್ಯ ಉಂಟುಮಾಡಿತ್ತು. ಅದರ ಹಿಂದೆಯೇ ಈ ಅಧ್ಯಯನ ವರದಿ ಬಂದಿದೆ.

ಸ್ವತಂತ್ರ ಕಾಂಗ್ರೆಸ್ಸೆನಲ್ ರೀಸರ್ಚ್ ಸರ್ವೀಸ್ (ಸಿಆರ್ಎಸ್), ವಾರದ ಹಿಂದೆ ಬಿಡುಗಡೆ ಮಾಡಿರುವ ಈ ವರದಿಯು ಅಮೆರಿಕ, ರಷ್ಯಾ, ಚೀನಾ ಅತ್ಯಾಧುನಿಕ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅಂತೆಯೇ ಭಾರತ, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಒಳಗೊಂಡಂತೆ ಅನೇಕ ದೇಶಗಳು ಇಂಥ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದಿದೆ.

ಈ ಪೈಕಿ ಆಸ್ಟ್ರೇಲಿಯಾವು ಅಮೆರಿಕ ಜೊತೆಗೆ ಹಾಗೂ ಭಾರತವು ರಷ್ಯಾ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ. ಭಾರತವು ರಷ್ಯಾದ ಸಹಭಾಗಿತ್ವದಲ್ಲಿ ಬ್ರಹ್ಮೋಸ್ II ಹೆಸರಿನ ಹೈಪರ್ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದೆ.

ಬ್ರಹ್ಮೋಸ್ II ಕ್ಷಿಪಣಿಯನ್ನು 2017ರ ವೇಳೆಗೆ ಬಳಕೆಗೆ ಸಜ್ಜುಗೊಳಿಸಬೇಕಿತ್ತು. ಆದರೆ, ಇದು ವಿಳಂಬವಾಗಿದ್ದು, 2025 ಮತ್ತು 2028ರ ನಡುವೆ ಬಳಕೆಗೆ ಸಿದ್ಧವಾಗಲಿದೆ ಎಂದು ವರದಿ ವಿವರಿಸಿದೆ.

ಅಲ್ಲದೆ, ಭಾರತವು ದೇಶೀಯವಾಗಿಯೂ ಹೈಪರ್ಸಾನಿಕ್ ತಂತ್ರಜ್ಞಾನದ ವಾಹಕ ಕಾರ್ಯಕ್ರಮದ ಭಾಗವಾಗಿ ದ್ವಿ ಸಾಮರ್ಥ್ಯದ ಹೈಪರ್ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದು, ಜೂನ್ 2019 ಮತ್ತು ಸೆಪ್ಟೆಂಬರ್ 2020ರಲ್ಲಿ ತನ್ನ ಮ್ಯಾಕ್ 6 ಸ್ಕ್ರ್ಯಾಮ್ಜೆಟ್ ಅನ್ನು ಪ್ರಯೋಗಾರ್ಥವಾಗಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ ಎಂದು ತಿಳಿಸಿದೆ.

ಭಾರತವು ಅಂದಾಜು 12 ಹೈಪರ್ಸಾನಿಕ್ ಪವನ ವಾಹಕಗಳನ್ನು ನಿರ್ವಹಣೆ ಮಾಡುತ್ತಿದ್ದು, ಇದರ ಪರೀಕ್ಷಾರ್ಥ ವೇಗವು ಮ್ಯಾಕ್ 13 ಆಗಿದೆ ಎಂದು ಅಮೆರಿಕದ ಸಂಸತ್ತಿನ ಸದಸ್ಯರು ಇರುವ ತಜ್ಞರ ಸಮಿತಿ ರೂಪಿಸಿದ ವರದಿ ತಿಳಿಸಿದೆ.

ಚೀನಾ ತನ್ನ ಹೈಪರ್ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಈ ವಾರ ವರದಿ ಮಾಡಿತ್ತು. ಆದರೆ, ಈ ವರದಿಯನ್ನು ಚೀನಾ ನಿರಾಕರಿಸಿತ್ತು. ತಾನು ಹೈಪರ್ಸಾನಿಕ್ ವಾಹಕದ ಪರೀಕ್ಷೆ ನಡೆಸಿದ್ದು, ಅಣುಶಕ್ತಿ ಸಾಮರ್ಥ್ಯದ ಕ್ಷಿಪಣಿಯ ಪರೀಕ್ಷೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈ ಕುರಿತು ವರದಿ ಮಾಡಿದ್ದ ಬ್ರಿಟೀಷ್ ದೈನಿಕವು ಚೀನಾ ಪರೀಕ್ಷೆ ನಡೆಸಿದ್ದ ಕ್ಷಿಪಣಿಯು 24 ಮೈಲುಗಳ ಅಂತರದಿಂದ ಗುರಿ ತಪ್ಪಿತ್ತು ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.