ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನೇಪಾಳ ಬಾಂಧವ್ಯ ಹಿಮಾಲಯದಂತೆ ಅಚಲ: ಪ್ರಧಾನಿ ಮೋದಿ

Last Updated 16 ಮೇ 2022, 12:29 IST
ಅಕ್ಷರ ಗಾತ್ರ

ಕಾಠ್ಮಂಡು: ‘ಭಾರತ ಮತ್ತು ನೇಪಾಳದ ಮಧ್ಯೆ ಸದಾ ಗಟ್ಟಿಯಾಗುತ್ತಿರುವ ಸ್ನೇಹ, ಆತ್ಮೀಯತೆಯಿಂದ ಇಡೀ ಮನುಕುಲಕ್ಕೆ ಪ್ರಯೋಜನವಾಗಲಿದೆ. ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಹಿಮಾಲಯದಂತೆ ಅಚಲವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಆಹ್ವಾನದ ಮೇರೆಗೆ ಒಂದು ದಿನದ ನೇಪಾಳ ಪ್ರವಾಸ ಕೈಗೊಂಡಿರುವ ಮೋದಿ, ಬುದ್ಧ ಪೂರ್ಣಿಮೆ ಅಂಗವಾಗಿ ಲುಂಬಿನಿಗೆ ಸೋಮವಾರ ಭೇಟಿ ನೀಡಿದರು. ಬಳಿಕ ಅಂತರರಾಷ್ಟ್ರೀಯ ಬೌದ್ಧ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ನಾವೂ ಸಹ ಭಾರತದೊಂದಿಗೆ ಬಾಂಧವ್ಯ ಗಟ್ಟಿಗೊಳಿಸುವುದನ್ನು ಎದುರುನೋಡುತ್ತಿದ್ದೇವೆ ಎಂದು ಶೇರ್ ಬಹದ್ದೂರ್ ದೇವುಬಾ ಹೇಳಿದರು. ಭಾರತ ಹಾಗೂ ನೇಪಾಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಲ್ಲಿ ಪರಸ್ಪರ ಸಂಬಂಧ ಹೊಂದಿವೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಉಭಯ ನಾಯಕರ ಭೇಟಿ ವೇಳೆ ಆರು ಒಪ್ಪಂದಗಳಿಗೆ ಭಾರತ– ನೇಪಾಳ ಸಹಿ ಹಾಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT