ಭಾನುವಾರ, ಸೆಪ್ಟೆಂಬರ್ 26, 2021
22 °C

ನವೆಂಬರ್‌ನಲ್ಲಿ ಭಾರತ– ಅಮೆರಿಕ ನಡುವೆ ಮಾತುಕತೆ: ಹರ್ಷವರ್ಧನ್ ಶೃಂಗ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ನಾಲ್ಕನೇ ವಾರ್ಷಿಕ '2+2 ಮಾತುಕತೆ' ಈ ವರ್ಷದ ನವೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ತಿಳಿಸಿದ್ದಾರೆ.

ನ್ಯೂಯಾರ್ಕ್‌ ಪ್ರವಾಸವನ್ನು ಮುಗಿಸಿಕೊಂಡು ಬುಧವಾರ ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಶೃಂಗ್ಲಾ, ‘ನಾವು ಈ ಅವಕಾಶವನ್ನು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ 2+2 ಆಂತರಿಕ ಅಧಿವೇಶನದ ಸಭೆ ನಡೆಸಲು ಬಳಸಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ನವೆಂಬರ್‌ನಲ್ಲಿ ನಡೆಯುವ 2+2 ಮಾತುಕತೆಯನ್ನು ನಾವು ಎದುರು ನೋಡುತ್ತಿದ್ದೇವೆ. ಮಾತುಕತೆಯ ನಿಖರ ದಿನಾಂಕಗಳು ಇನ್ನೂ ನಿಗದಿಯಾಗಿಲ್ಲ’ ಎಂದು ಶೃಂಗ್ಲಾ ಅವರು ಶುಕ್ರವಾರ ತಮ್ಮ ಭೇಟಿಯ ಕೊನೆಯಲ್ಲಿ ಭಾರತೀಯ ವರದಿಗಾರರಿಗೆ ತಿಳಿಸಿದರು.

2+2 ಮಾತುಕತೆ ಎರಡೂ ಕಡೆಯ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವೆ ನಡೆಯುತ್ತದೆ. ಚೊಚ್ಚಲ ‘2+2’ ಮಾತುಕತೆ 2018ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. 2+2 ಹಿಂದಿನ ಮಾತುಕತೆಯೂ ನವದೆಹಲಿಯಲ್ಲಿ ನಡೆದಿತ್ತು. ಮುಂದಿನ ಸಭೆಯನ್ನು ಅಮೆರಿಕ ವಾಷಿಂಗ್ಟನ್‌ನಲ್ಲಿ ಆಯೋಜಿಸಿದೆ.

ರಕ್ಷಣಾ ಸಂಬಂಧ ಬಲ: ಉಭಯ ರಾಷ್ಟ್ರಗಳ ಪುನರುಚ್ಚಾರ

ಎರಡೂ ರಾಷ್ಟ್ರಗಳು ಅಫ್ಗಾನಿಸ್ತಾನದ ವಿಚಾರದ ಬಗ್ಗೆ ಚರ್ಚಿಸುವ ಜತೆಗೆ, ಶೃಂಗ್ಲಾ ಭೇಟಿಯ ಸಂದರ್ಭ ಉಭಯ ದೇಶಗಳು, ವಿಶ್ವಸಂಸ್ಥೆ ಮತ್ತು ಈ ವರ್ಷದ ಕೊನೆಯಲ್ಲಿ ಇಲ್ಲಿ ನಡೆಯಲಿರುವ ಕ್ವಾಡ್‌ ಶೃಂಗಸಭೆ ಸೇರಿದಂತೆ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಕುರಿತೂ ವ್ಯಾಪಕ ಚರ್ಚೆ ನಡೆಸಿದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು