ಶುಕ್ರವಾರ, ಮಾರ್ಚ್ 24, 2023
23 °C

ಆರ್‌ಎನ್‌ಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಹರ್ಮೀತ್ ಧಿಲ್ಲೋನ್‌ ಪರಾಭವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ರಿಪಬ್ಲಿಕನ್‌ ಪಕ್ಷದ ರಾಷ್ಟ್ರೀಯ ಸಮಿತಿ (ಆರ್‌ಎನ್‌ಸಿ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತ ಮೂಲದ ಸಂಸದೆ, 54 ವರ್ಷದ ಹರ್ಮೀತ್‌ ಧಿಲ್ಲೋನ್‌ ಪರಾಭವಗೊಂಡಿದ್ದಾರೆ.

ತೀವ್ರ ಸ್ಪರ್ಧೆ ಕಂಡ ಚುನಾವಣೆಯಲ್ಲಿ 49 ವರ್ಷದ ರೊನ್ನಾ ಮೆಕ್‌ಡೇನಿಯಲ್‌ ಮರು ಆಯ್ಕೆಗೊಂಡರು. ಇದರೊಂದಿಗೆ ಈ ಸ್ಥಾನಕ್ಕೆ ಅವರು ನಾಲ್ಕನೇ ಬಾರಿ ಆಯ್ಕೆಯಾದಂತಾಗಿದೆ.

ಗೌಪ್ಯ ಮತದಾನ ನಡೆದಿದ್ದು, ಮೆಕ್‌ ಡೇನಿಯಲ್ 111 ಮತ ಪಡೆದರೆ, ಧಿಲ್ಲೋನ್‌ ಅವರು 51 ಮತ ಪಡೆಯಲಷ್ಟೇ ಶಕ್ತರಾದರು. ಇನ್ನೊಬ್ಬ ಸ್ಪರ್ಧಿ ಮೈಕ್‌ ಲಿಂಡೆಲ್ ನಾಲ್ಕು ಮತ ಪಡೆದರು.

ಆರ್‌ಎನ್‌ಸಿಯು ಡೊನಾಲ್ಡ್ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಕ್ಷದ ಉನ್ನಾಧಿಕಾರ ಆಡಳಿತ ಸಮಿತಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು