ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಅಮೆರಿಕ ಬಾಹ್ಯಾಕಾಶ ಕೈಗಾರಿಕಾ ತಜ್ಞ ಎ.ಸಿ. ಚರಣಿಯಾ ಅವರನ್ನು ನಾಸಾದ ಮುಖ್ಯ ತಾಂತ್ರಿಕ ತಜ್ಞರಾಗಿ ನೇಮಕ ಮಾಡಲಾಗಿದೆ.
ಇವರು ನಾಸಾ ಮುಖ್ಯ ಕಚೇರಿಯಲ್ಲಿ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರಿಗೆ ತಾಂತ್ರಿಕ ನೀತಿ ಮತ್ತು ಕಾರ್ಯಕ್ರಮಗಳಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.
‘ನಾಸಾ ಯೋಜನೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಚರಣಿಯಾ ಅವರು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ನಿಭಾಯಿಸುವ ಪರಿಣತಿ ಹೊಂದಿರುವ ಅನುಭವಿ ನಾಯಕ’ ಎಂದು ನಾಸಾದ ತಂತ್ರಜ್ಞಾನ, ನೀತಿ ಮತ್ತು ಕಾರ್ಯತಂತ್ರ ಕುರಿತ ಸಹ ವ್ಯವಸ್ಥಾಪಕಿ ಭವ್ಯ ಲಾಲ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.