ಬುಧವಾರ, ನವೆಂಬರ್ 25, 2020
19 °C

ಬೈಡನ್‌ ಪರ ಪ್ರಚಾರ: ಮುಖ್ಯ ಪಾತ್ರ ವಹಿಸಿದ್ದ ಭಾರತ ಸಂಜಾತ ಅಮೆರಿಕದ ಯುವಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್‌ ಪರ ಪ್ರಚಾರದಲ್ಲಿ ಭಾರತ ಸಂಜಾತ ಅಮೆರಿಕನ್ನರನ್ನು ಮತ್ತು ಏಷ್ಯಾ ಮೂಲದ ಅಮೆರಿಕನ್‌ ಸಮುದಾಯದವರನ್ನು ಸಂಘಟಿಸುವಲ್ಲಿ ಅಮಿತ್‌ ಜಾನಿ ಪ್ರಮುಖ ಪಾತ್ರ ವಹಿಸಿದ್ದರು.

ಮೂಲತಃ ಭಾರತದವರಾದ ಅಮಿತ್‌ ಅವರು ಪ್ರಚಾರ ಕಾರ್ಯದ ನಿರ್ದೇಶಕರಾಗಿದ್ದರು. ಸುಮಾರು ನೂರು ವಿಧದ ಭಾಷಿಕರನ್ನು ಮತ್ತು 50 ವಿವಿಧ ಜನಾಂಗೀಯದವರನ್ನು ಇವರು ಒಗ್ಗೂಡಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಹತ್ತಾರು ಮಂದಿ ಪೈಪೋಟಿ ನಡೆಸುತ್ತಿದ್ದ ವೇಳೆಯಲ್ಲೇ ಅಮಿತ್‌ ಅವರು ಬೈಡನ್‌ ಪರ ಪ್ರಚಾರಕ್ಕೆ ಸಜ್ಜಾಗಿದ್ದರು. ಇವರು ಭಾರತದ ಗುಜರಾತ್‌ನ ರಾಜ್‌ಕೋಟ್‌ನವರು.

ಭಾರತ ಸಂಜಾತ ಅಮೆರಿಕನ್ನರು ಮತ್ತು ಏಷ್ಯಾ ಮೂಲದ ಅಮೆರಿಕನ್‌ ಸಮುದಾಯದವರು ಹಿಂದಿನ ಚುನಾವಣೆಗಿಂತ ಈ ಬಾರಿ ಶೇಕಡಾ 5ರಷ್ಟು ಹೆಚ್ಚು ಮಂದಿ ಮತ ಚಲಾಯಿಸಿದ್ದರು. ಅಲ್ಲದೆ ಈ ಸಮುದಾಯದ ಶೇ 71ರಷ್ಟು ಮಂದಿ ಬೈಡನ್‌ ಅವರಿಗೆ ಮತ ಚಲಾಯಿಸಿದ್ದರು ಎಂದು ಟಾರ್ಗೆಟ್‌ ಸ್ಮಾರ್ಟ್‌ ಸಿಇಒ ಟಾಮ್‌ ಬೊನಿಯೆರ್‌ ಅವರ ಅಧ್ಯಯನದ ಅಂಕಿಅಂಶಗಳ ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು