ಮಸ್ಕತ್: ಭಾರತದ ಕಲಾವಿದ ಆತ್ಮಹತ್ಯೆ

ದುಬೈ: ಮಸ್ಕತ್‌ನಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಭಾರತ ಸಂಜಾತ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಒಮನ್ ಪೊಲೀಸರು ತಿಳಿಸಿದ್ದಾರೆ.
‘ರುವಿ ಪ್ರದೇಶದ ಹೊಂಡಾ ರಸ್ತೆಯಲ್ಲಿರುವ ಅರ್ಪಾಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಗ್ರಾಫಿಕ್ ಡಿಸೈನರ್ ಉನ್ನಿ ಕೃಷ್ಣನ್(50) ಅವರ ಮೃತ ಶರೀರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಒಮನ್‌ನ ಭಾರತೀಯ ಸಾಂಸ್ಕೃತಿಕ ಸಮುದಾಯದ ಸದಸ್ಯರಾಗಿದ್ದರು’ ಎಂದು ಆರ್‌ಪಿಒ ಅಧಿಕಾರಿಗಳು ತಿಳಿಸಿದರು.
‘ಮೃತಶರೀರವನ್ನು ಪೊಲೀಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.