ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಸಿಂಗಪುರ| ದಂಪತಿಯ ಲೈಂಗಿಕ ಕ್ರಿಯೆ ಚಿತ್ರೀಕರಿಸಿದ ಭಾರತ ಮೂಲದ ವ್ಯಕ್ತಿಗೆ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ: ಸಾರ್ವಜನಿಕ ಶೌಚಾಲಯದಲ್ಲಿ ದಂಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಚಿತ್ರೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 36 ವರ್ಷದ ಭಾರತೀಯ ಪ್ರಜೆಗೆ ಸಿಂಗಪುರದ ಸ್ಥಳೀಯ ನ್ಯಾಯಾಲಯವೊಂದು ಸೋಮವಾರ 17 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅನ್ಯರ ಲೈಂಗಿಕ ಕ್ರಿಯೆ ವೀಕ್ಷಿಸಿ ತೃಪ್ತಿ ಪಡೆದ ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಭಾರತ ಮೂಲದ ಕುಪ್ಪುಸಾಮಿ ಕಾರ್ತಿಕ್ (36) ಎಂಬಾತನಿಗೆ ಶಿಕ್ಷೆ ನೀಡಲಾಯಿತು. ಕಾರ್ತಿಕ್‌ ವಿರುದ್ಧ ಇತರ ಮೂರು ಆರೋಪಗಳನ್ನೂ ಪರಿಗಣಿಸಲಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿ ‘ನ್ಯೂಸ್‌ ಏಷ್ಯಾ ರಿಪೋರ್ಟ್‌’ ವರದಿ ಮಾಡಿದೆ.

ಬಿಶನ್-ಆಂಗ್ ಮೊ ಕಿಯೋ ಉದ್ಯಾನದ ಸಾರ್ವಜನಿಕ ಶೌಚಾಲಯಕ್ಕೆ ತೆರಳುತ್ತಿದ್ದ ದಂಪತಿಯನ್ನು ಕಾರ್ತಿಕ್‌ ಹಿಂಬಾಲಿಸಿದ್ದ. ದಂಪತಿ ಶವರ್‌ನಲ್ಲಿ ಸ್ನಾನ ಮಾಡುವುದು ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದುನ್ನು ಕಾರ್ತಿಕ್‌ ಮರೆಯಲ್ಲಿ ನಿಂತು ವಿಡಿಯೊ ಚಿತ್ರೀಕರಣ ಮಾಡಿದ್ದ.

ಕಾರ್ತಿಕ್ ಮೂರು ವಿಡಿಯೋಗಳನ್ನು ಚಿತ್ರೀಕರಿಸಿದ್ದಲ್ಲದೇ, ದಂಪತಿಯ ಮುಖ ಕಾಣುವಂತೆ ನಾಲ್ಕರಿಂದ ಐದು ಫೋಟೊಗಳನ್ನು ತೆಗೆದಿದ್ದ. ಎರಡು ದಿನಗಳ ನಂತರ ಅದೇ ಪಾರ್ಕ್‌ನಲ್ಲಿ ಮತ್ತೊಮ್ಮೆ ದಂಪತಿಯನ್ನು ಕಾರ್ತಿಕ್‌ ನೋಡಿದ್ದ. ದಂಪತಿ ಅದೇ ಶೌಚಾಲಯಕ್ಕೆ ಹೋಗುವುದನ್ನು ಗಮನಿಸಿ, ಮತ್ತೆ ವಿಡಿಯೊ ಚಿತ್ರೀಕರಣ ನಡೆಸಿದ್ದ ಎಂದು ಎಂದು ಕೋರ್ಟ್‌ಗೆ ವಕೀಲರು ತಿಳಿಸಿದ್ದಾರೆ.

ಇದಾದ ಕೆಲ ದಿನಗಳ ನಂತರ ಅದೇ ಶೌಚಾಲಯಕ್ಕೆ ತೆರಳಿದ್ದ ಕಾರ್ತಿಕ್‌, ಮಹಿಳೆಯೊಬ್ಬರನ್ನು ಚಿತ್ರೀಕರಿಸಿದ್ದ. ಸ್ಥಳೀಯ ಯುವಕನೊಬ್ಬ ಕಾರ್ತಿಕ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

ಕಳೆದ ವರ್ಷ ಈ ಘಟನೆಗಳು ನಡೆದಿದ್ದವು. ನ.20ರಂದು ಕಾರ್ತಿಕ್‌ನ ಬಂಧನವಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಕಾರ್ತಿಕ್‌ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು