ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ ಭಾರತ ಮೂಲದ ಲಿಯೋ ವರದ್ಕರ್

Last Updated 16 ಡಿಸೆಂಬರ್ 2022, 13:19 IST
ಅಕ್ಷರ ಗಾತ್ರ

ಡಬ್ಲಿನ್‌: ಭಾರತ ಮೂಲದ ಲಿಯೋ ವರದ್ಕರ್ ಅವರು ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ.

ಪ್ರಧಾನಿ ಹುದ್ದೆ ಅಲಂಕರಿಸುವಸಲುವಾಗಿ ಅವರು, ಉಪ ಪ್ರಧಾನಿ ಹುದ್ದೆಯಿಂದ ಶನಿವಾರ ನಿರ್ಗಮಿಸಿದ್ದಾರೆ.

43 ವರ್ಷ ವಯಸ್ಸಿನ ವರದ್ಕರ್ ಅವರ ಪಕ್ಷ ‘ಫೈನ್ ಗೇಲ್’ ಮತ್ತು ಪ್ರಸ್ತುತ ಪ್ರಧಾನಿಯಾಗಿರುವ ಮೈಕೆಲ್ ಮಾರ್ಟಿನ್ ಅವರ ‘ಫಿಯಾನಾ ಫೇಲ್ ಪಾರ್ಟಿ’ಗಳ ನಡುವೆ 2020ರ ಚುನಾವಣೆ ನಂತರ ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ಸರ್ಕಾರ ರಚನೆಯಾಗಿತ್ತು. ಅದರಂತೆ ಈ ಬಾರಿ ವರದ್ಕರ್‌ ಪ್ರಧಾನಿಯಾಗುತ್ತಿದ್ದಾರೆ.

ಲಿಯೋ ವರದ್ಕರ್‌ ಮಹಾರಾಷ್ಟ್ರದ ವರದ್ ಗ್ರಾಮದ ವೈದ್ಯ ಅಶೋಕ್ ವರದ್ಕರ್ ಅವರ ಪುತ್ರ. 1960ರ ದಶಕದಲ್ಲಿ ಅಶೋಕ್‌ ವರದ್ಕರ್‌ ಪಾಶ್ಚಾತ್ಯ ಬ್ರಿಟನ್‌ಗೆ ವಲಸೆ ಹೋಗಿದ್ದರು. ವರದ್ಕರ್‌ ತಾಯಿ ಐರಿಷ್‌ ಆಗಿದ್ದಾರೆ.

ಲಿಯೋ ವರದ್ಕರ್ ಅವರು ಈ ಹಿಂದೆ 2017 ರಿಂದ 2020 ರವರೆಗೆ ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಡಬ್ಲಿನ್‌ನ (ಐರ್ಲೆಂಡ್‌ ರಾಜಧಾನಿ) ಟ್ರಿನಿಟಿ ಕಾಲೇಜ್‌ನಿಂದ ವೈದ್ಯಕೀಯ ಪದವಿಯನ್ನು ಪಡೆದಿರುವ ವರದ್ಕರ್‌, ಕೆಲ ಕಾಲ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು 2007ರಲ್ಲಿ ಡಬ್ಲಿನ್ ವೆಸ್ಟ್‌ನನಿಂದ ಚುನಾವಣೆ ಗೆದ್ದಿದ್ದರು.

ವರದ್ಕರ್‌ ಅವರು ತಾವು ಸಲಿಂಗಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. 2015ರಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಿಸಿಕೊಡುವ ಜನಾಭಿಪ್ರಾಯದ ವೇಳೆ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಹೃದ್ರೋಗ ತಜ್ಞ ಮ್ಯಾಥ್ಯೂ ಬ್ಯಾರೆಟ್ ಅವರು ವರದ್ಕರ್‌ ಅವರ ಸಂಗಾತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT