ಬುಧವಾರ, ಡಿಸೆಂಬರ್ 7, 2022
22 °C

ನಗದು ಚಿಪ್‌ ಕಳವು: ಭಾರತೀಯ ಸಂಜಾತ ವ್ಯಕ್ತಿಗೆ 5 ವಾರ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಸಿಂಗಪುರದ ಕ್ಯಾಸಿನೊದಲ್ಲಿ 34 ಬಾರಿ ಇತರೆ ಜೂಜುಕೋರರಿಂದ ನಗದು ಚಿಪ್‌ಗಳನ್ನು ಕಳವು ಮಾಡಿದ್ದ ಭಾರತೀಯ ಸಂಜಾತ ವ್ಯಕ್ತಿಗೆ ನ್ಯಾಯಾಲಯ ಶುಕ್ರವಾರ ಐದು ವಾರಗಳ ಜೈಲು ಶಿಕ್ಷೆ ವಿಧಿಸಿದೆ.

26 ವರ್ಷದ ಚಿನ್ನಸ್ವಾಮಿ ಮುನಿರಾಜ್, ಮೊತ್ತಬ್ಬರಿಗೆ ಸೇರಿದ ಸಿಂಗಪುರ ಡಾಲರ್ 175 (ಯುಎಸ್‌ಡಿ 126) ಮೌಲ್ಯದ ನಗದು ಚಿಪ್‌ಗಳನ್ನು ಮೋಸದಿಂದ ಪಡೆದ ಆರೋಪ ಹೊತ್ತಿದ್ದಾರೆ. ಈ ಸಂಬಂಧ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.

ಕಟ್ಟಡ ಕಾರ್ಮಿಕರಾಗಿರುವ ಚಿನ್ನಸಾಮಿ, ಜುಲೈನಲ್ಲಿ ನಾಲ್ಕು ದಿನಗಳಲ್ಲಿ ಬೇಫ್ರಂಟ್ ಅವೆನ್ಯೂನಲ್ಲಿರುವ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊಗೆ ಹೋಗಿದ್ದರು. ಪ್ರತಿ ಬಾರಿಯೂ ತನ್ನ ಸ್ವಂತ ನಗದು ಚಿಪ್‌ಗಳನ್ನು ಬಳಸಿದ ಬಳಿಕ ಇತರರಿಂದ ನಗದು ಚಿಪ್‌ಗಳನ್ನು ಕಳವು ಮಾಡುತ್ತಿದ್ದ. ಜುಲೈ 10 ಮತ್ತು 14 ರ ನಡುವೆ 34 ಸಂದರ್ಭಗಳಲ್ಲಿ ಸಿಂಗಪುರ ಡಾಲರ್ 845 ಮೌಲ್ಯದ ನಗದು ಚಿಪ್‌ಗಳನ್ನು ಕಳವು ಮಾಡಿದ್ದ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು