ನ್ಯೂಯಾರ್ಕ್: ಕ್ಯಾಲಿಪೋರ್ನಿಯಾದಲ್ಲಿ ಇರುವ ಪ್ರಮುಖ ಗುರುದ್ವಾರಕ್ಕೆ ಬೆಂಕಿ ಹಚ್ಚಲು ಮತ್ತು ಜನರ ಮೇಲೆ ಗುಂಡಿನ ದಾಳಿ ನಡೆಸಲು ಜನರನ್ನು ನಿಯೋಜಿಸಲು ಸಂಚು ನಡೆಸಿದ್ದ ಆರೋಪದಡಿ 60 ವರ್ಷದ ವಯಸ್ಸಿನ ಸಿಖ್‌ವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಂಧಿತನನ್ನು ರಾಜ್‌ವೀರ್ ರಾಜ್ ಸಿಂಗ್ ಗಿಲ್ ಎಂದು ಗುರುತಿಸಲಾಗಿದೆ. ಇವರು ಬೇಕರ್ಸ್‌ಫೀಲ್ಡ್ ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸಿದ್ದರು. ಆತನನ್ನು ಮಾರ್ಚ್ 4ರಂದು ಬಂಧಿಸಲಾಗಿದೆ. ಕ್ರಿಮಿನಲ್ ಬೆದರಿಕೆ ಆರೋಪಕ್ಕೆ ಸಂಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.