ಲಂಡನ್ : ವೀಸಾ ಪಡೆದುಕೊಳ್ಳಲು ಕಡ್ಡಾಯವಾಗಿ ಬರೆಯಬೇಕಿದ್ದ ಇಂಗ್ಲಿಪ್ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳ ವೀಸಾವನ್ನು ಬ್ರಿಟನ್ ರದ್ದು ಮಾಡಿತ್ತು. ಈ ‘ಅನ್ಯಾಯ’ದ ರದ್ದತಿಯನ್ನು ವಾಪಸ್ ಪಡೆಯಬೇಕು ಎಂದು ಭಾರತವು ಸೇರಿ ಹಲವು ದೇಶದ ವಿದ್ಯಾರ್ಥಿಗಳು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಲ್ಲಿ ಮನವಿ ಮಾಡಿದ್ದಾರೆ.
ಬ್ರಿಟನ್‌ನ ಎರಡು ಪರೀಕ್ಷಾ ಕೇಂದ್ರಗಳಲ್ಲಿ 2014ರಲ್ಲಿ ಅಕ್ರಮ ನಡೆದಿತ್ತು. ಬಿಬಿಸಿ ತನ್ನ ‘ಪನೋರಮಾ’ ಕಾರ್ಯಕ್ರಮದಲ್ಲಿ ಈ ಬಗ್ಗೆ ವರದಿ ಮಾಡಿತ್ತು. ಬ್ರಿಟನ್ ಸರ್ಕಾರ ತಕ್ಷಣದಲ್ಲಿಯೇ ಇಂಥ ಕೇಂದ್ರಗಳನ್ನು ಮುಚ್ಚಿಸಿತ್ತು. ಜೊತೆಗೆ, ಈ ಕೇಂದ್ರದಿಂದ ವೀಸಾ ಪಡೆಯಲು ಪರೀಕ್ಷೆ ಬರೆದಿದ್ದ ಸಾವಿರಾರು ವಿದ್ಯಾರ್ಥಿಗಳ ವೀಸಾವನ್ನು ರದ್ದು ಮಾಡಿತ್ತು.
ಇಂಥ ವಿದ್ಯಾರ್ಥಿಗಳ ಪರವಾಗಿ ‘ಮೈಗ್ರೆಂಟ್ ವಾಯ್ಸ್’ ಎನ್ನವ ಸ್ವಯಂ ಸೇವಾ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳ ವೀಸಾ ರದ್ದತಿಯನ್ನು ವಾಪಸ್ ಪಡೆಯುವಂತೆ ಪ್ರಧಾನಿ ರಿಷಿ ಸುನಕ್ ಅವರಿಗೆ ಸೋಮವಾರ ಮತ್ತೊಮ್ಮೆ ಮನವಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.