ಗುರುವಾರ , ಅಕ್ಟೋಬರ್ 28, 2021
18 °C

ಲಸಿಕೆಗಳ ರಫ್ತು: ಭಾರತದ ನಿರ್ಧಾರ ಮಹತ್ವದ ಬೆಳವಣಿಗೆ- ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಕೋವಿಡ್‌ ಲಸಿಕೆಗಳನ್ನು ರಫ್ತು ಮಾಡಲು ಭಾರತ ತೀರ್ಮಾನಿಸಿರುವುದು ಮಹತ್ವದ ಬೆಳವಣಿಗೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್‌ ಹೇಳಿದ್ದಾರೆ.

‘ವರ್ಷಾಂತ್ಯದೊಳಗೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇ 40ರಷ್ಟು ಜನರಿಗೆ ಲಸಿಕೆ ನೀಡಬೇಕು ಎಂಬ ಗುರಿ ಸಾಧನೆಗೆ ಭಾರತದ ಈ ನಿರ್ಧಾರ ನೆರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಲಸಿಕೆ ಮೈತ್ರಿ’ ಕಾರ್ಯಕ್ರಮದಡಿ ಕೋವಿಡ್‌–19 ಲಸಿಕೆಗಳ ರಫ್ತಿಗೆ ಅಕ್ಟೋಬರ್‌ ವೇಳೆಗೆ ಚಾಲನೆ ನೀಡುವುದಾಗಿ ಭಾರತ ಸೋಮವಾರ ಘೋಷಿಸಿದೆ.

‘ಅಕ್ಟೋಬರ್‌ನಲ್ಲಿ ಕೋವಿಡ್‌ ಲಸಿಕೆಯ ರಫ್ತಿಗೆ ಚಾಲನೆ ನೀಡುವುದಾಗಿ ಘೋಷಿಸಿರುವುದಕ್ಕೆ ಆರೋಗ್ಯ ಸಚಿವರಿಗೆ ಧನ್ಯವಾದಗಳು’ ಎಂದು ಗೆಬ್ರೇಯೇಸಸ್‌ ಅವರು ಟ್ವೀಟ್‌ ಮಾಡಿದ್ದು, ಭಾರತದ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಅವರಿಗೆ ಧನ್ಯವಾದ ಹೇಳಿದ್ದಾರೆ.

ಕೋವಿಡ್‌ನ ಎರಡನೇ ಅಲೆ ಏಪ್ರಿಲ್‌ನಲ್ಲಿ ಕಾಣಿಸಿಕೊಂಡಾಗ, ಭಾರತ ಕೋವಿಡ್‌ ಲಸಿಕೆಗಳ ರಫ್ತನ್ನು ಸ್ಥಗಿತಗೊಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು