ಗುರುವಾರ , ಏಪ್ರಿಲ್ 15, 2021
23 °C

ಇಂಡೋನೇಷ್ಯಾದಲ್ಲಿ ಕಮರಿಗೆ ಬಿದ್ದ ಬಸ್‌: 27 ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ: ಇಂಡೋನೇಷ್ಯಾದ ಮುಖ್ಯ ದ್ವೀಪವಾಗಿರುವ ಜಾವಾದಲ್ಲಿ ಗುರುವಾರ ಬಸ್ಸೊಂದು 20 ಮೀಟರ್‌ ಆಳದ ಕಮರಿಗೆ ಬಿದ್ದುದರಿಂದ 27 ಮಂದಿ ಮೃತಪಟ್ಟಿದ್ದು, ಇತರ 39 ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ಜಾವಾ ‍ಪ್ರಾಂತ್ಯದ ತಾಸಿಕ್‌ಮಲಯ ಜಿಲ್ಲೆಯ ಯಾತ್ರಾಸ್ಥಳವೊಂದಕ್ಕೆ ತೆರಳಿ ಸುಬಾಂಗ್‌ ನಗರಕ್ಕೆ ಬಸ್‌ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಬಸ್‌ನಲ್ಲಿ ಇಸ್ಲಾಮಿಕ್‌ ಜ್ಯೂನಿಯರ್‌ ಹೈಸ್ಕೂಲ್‌ ವಿದ್ಯಾ‌ರ್ಥಿಗಳಿದ್ದರು ಎಂಧು ಪೊಲೀಸರು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಆಗಾಗ ರಸ್ತೆ ಅಪಘಾತಗಳು ಸಂಭವಿಸಲು ವಾಹನಗಳ ಕಳಪೆ ನಿರ್ವಹಣೆ ಮತ್ತು ಸಮರ್ಪಕ ರಸ್ತೆಗಳು ಇಲ್ಲದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. 2019ರ ಡಿಸೆಂಬರ್‌ನಲ್ಲಿ ಸುಮಾತ್ರಾ ದ್ವೀಪದಲ್ಲಿ 80 ಮೀಟರ್ ಆಳದ ಕಮರಿಗೆ ಬಸ್‌ ಬಿದ್ದು 35 ಮಂದಿ ಮೃತಪಟ್ಟಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು