ಇಂಡೊನೇಷ್ಯಾ: ಮೌಂಟ್ ಸೆಮೆರು ಜ್ವಾಲಾಮುಖಿಯಿಂದ ಚಿಮ್ಮಿದ ಲಾವಾರಸ

ಜಕಾರ್ತ: ಇಂಡೊನೇಷ್ಯಾದ ಬೃಹತ್ ಸಜೀವ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್ ಸೆಮೆರು ಜ್ವಾಲಾಮುಖಿಯು ಅತ್ಯಂತ ಬಿಸಿ ಅನಿಲವನ್ನು ಮತ್ತು ಭಾರಿ ಪ್ರಮಾಣದ ಲಾವಾರಸವನ್ನು ಭಾನುವಾರ ಹೊರಚಿಮ್ಮಿಸಿತು.
ಮಳೆ ಬಂದ ಕಾರಣ ಜ್ವಾಲಾಮುಖಿಯ ಚಟುವಟಿಕೆ ತಗ್ಗಿತು. ಹಲವಾರು ಗ್ರಾಮಗಳು ಬೂದಿಯಿಂದ ಮುಚ್ಚಿ ಹೋಗಿದ್ದವು. ಹೊಗೆಯ ಕಾರಣ ಸೂರ್ಯ ಕಿರಣಗಳು ಭೂಮಿಗೆ ಬೀಳಲಿಲ್ಲ. ಹಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಜ್ವಾಲಮುಖಿಯ ಚಟುವಟಿಕೆ ಹೆಚ್ಚಾದಂತೆ ಅಪಾಯ ವಲಯದ ಅಳತೆಯನ್ನೂ ಅಧಿಕಾರಿಗಳು 8 ಕಿ.ಮೀಗೆ ವಿಸ್ತರಿಸಿದರು. ಲಾವಾರಸ ಸೇರುವ ಬೆಸುಕ್ ಕೊಬೊಜನ್ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ವಿಜ್ಞಾನಿಗಳು ಸಲಹೆ ನೀಡಿದ್ದಾರೆ ಎಂದು ಜ್ವಾಲಾಮುಖಿಶಾಸ್ತ್ರ ಮತ್ತು ಭೂಗರ್ಭದ ಅಪಾಯ ನಿರೀಕ್ಷಣಾ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೂಡಾ ಈ ಜ್ವಾಲಾಮುಖಿಯಿಂದ ಲಾವಾರಸ ಚಿಮ್ಮಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.