ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗೆ ಪ್ರಚೋದನೆ: ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್ ಆಡಳಿತ

Last Updated 12 ಡಿಸೆಂಬರ್ 2020, 7:20 IST
ಅಕ್ಷರ ಗಾತ್ರ

ಟೆಹ್ರಾನ್: ಆನ್‌ಲೈನ್‌ ಮೂಲಕ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒಮ್ಮೆ ಗಡಿಪಾರು ಮಾಡಲಾಗಿದ್ದ ಪತ್ರಕರ್ತನೊಬ್ಬನನ್ನು ಇರಾನ್ ಸರ್ಕಾರ ಶನಿವಾರ ಗಲ್ಲಿಗೇರಿಸಿದೆ.

2017ರಲ್ಲಿ ದೇಶದ ಆರ್ಥಿಕತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ನಡೆದ ಪ್ರತಿಭಟನೆಯನ್ನು ತನ್ನ ಆನ್‌ಲೈನ್ ಚಾನಲ್‌ ಮೂಲಕ ಪ್ರಚಾರ ಮಾಡಿ, ಜನರನ್ನು ಪ್ರಚೋದಿಸಿದ್ದರು ಎಂಬ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಪತ್ರಕರ್ತ ರುಹೊಲ್ಲಾಹ್ ಝಾಮ್‌ ಅವರನ್ನು ಶನಿವಾರ ಮುಂಜಾನೆ ಗಲ್ಲಿಗೇರಿಸಲಾಯಿತು.

ಕಳೆದ ಜೂನ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ‘ಇದು ಭೂಮಿ ಮೇಲಿನ ಭ್ರಷ್ಟಾಚಾರ‘ ಎಂದು ಉಲ್ಲೇಖಿಸಿ ಝಾಮ್‌ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಗೂಢಚರ್ಯೆ ಅಥವಾ ಇರಾನ್‌ ಸರ್ಕಾರವನ್ನು ಉರುಳಿಸುವಂತಹ ಪ್ರಯತ್ನಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಝಾಮ್‌ನ ವೆಬ್‌ಸೈಟ್ ಮತ್ತು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ನಿಂದ ಟೆಲಿಗ್ರಾಂ ಚಾನಲ್‌ ಮೂಲಕ, ಇರಾನ್‌ನ ಶಿಯಾ ಪ್ರಜಾಪ್ರಭುತ್ವವನ್ನು ನೇರವಾಗಿ ಪ್ರಶ್ನಿಸಿದ ಅಧಿಕಾರಿಗಳ ಬಗ್ಗೆ ಮುಜುಗರದ ಪ್ರಚಾರ ಮಾಡಿ, ಸರ್ಕಾರದ ವಿರುದ್ಧ ನಡೆಯುವ ಪ್ರತಿಭಟನೆಯ ಸಮಯವನ್ನು ಪ್ರಕಟಿಸಿದ್ದರು.

2017ರ ಕೊನೆಯಲ್ಲಿ ಪ್ರಾರಂಭವಾದ ಆ ಪ್ರತಿಭಟನೆಗಳು, 2009 ರ ಹಸಿರು ಆಂದೋಲನದ ನಂತರ ಇರಾನ್‌ಗೆ ದೊಡ್ಡ ಸವಾಲನ್ನು ತಂದೊಡ್ಡಿದ್ದವು ಮತ್ತು ಕಳೆದ ವರ್ಷದ ನವೆಂಬರ್‌ನಲ್ಲಿ ಇದೇ ರೀತಿಯ ಸಾಮೂಹಿಕ ಅಶಾಂತಿ ಸೃಷ್ಟಿಸಲು ಪ್ರತಿಭಟನೆಗಳು ವೇದಿಕೆ ಕಲ್ಪಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT