ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್: 6 ಜನರ ಮೇಲೆ ಚಾಕು ದಾಳಿ: ಲಂಕಾ ಪ್ರಜೆಗೆ ಗುಂಡಿಕ್ಕಿದ ಪೊಲೀಸ್

Last Updated 4 ಸೆಪ್ಟೆಂಬರ್ 2021, 1:28 IST
ಅಕ್ಷರ ಗಾತ್ರ

ಆಕ್ಲೆಂಡ್: ಸೂಪರ್ ಮಾರ್ಕೆಟ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ಮಾಡಿ ಆರು ಜನರನ್ನು ಗಾಯಗೊಳಿಸಿದ ಐಸಿಸ್‌ ಸಂಘಟನೆಯಿಂದ ಪ್ರೇರಿತನಾದ ದಾಳಿಕೋರನನ್ನು ನ್ಯೂಜಿಲೆಂಡ್ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

ಶ್ರೀಲಂಕಾ ಪ್ರಜೆಯಾದ ಆತ ಭಯೋತ್ಪಾದಕರ ಪಟ್ಟಿಯಲ್ಲಿದ್ದು, ಸೂಪರ್ ಮಾರ್ಕೆಟ್‌ನಲ್ಲಿ ಜನರ ಮೇಲೆ ದಾಳಿ ಮಾಡಿದ್ದಾನೆ ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದರು.

2011ರಲ್ಲಿ ನ್ಯೂಜಿಲೆಂಡ್‌ಗೆ ಬಂದು ನೆಲೆಸಿದ್ದ ವ್ಯಕ್ತಿ, ಇಂದು ಆಕ್ಲೆಂಡ್‌ನ ಶಾಪಿಂಗ್ ಮಾಲ್‌ ಪ್ರವೇಶಿಸಿ ಚಾಕುವಿನಿಂದ ಜನರ ಮೇಲೆ ದಾಳಿ ನಡೆಸಿದ್ದಾನೆ. 60 ಸೆಕೆಂಡ್‌ಗಳಲ್ಲಿ ಇಷ್ಟೆಲ್ಲ ನಡೆದುಹೋಗಿದ್ದು, ದಾಳಿಕೋರನನ್ನು ಪೊಲೀಸರು ಹೊಡೆದುರುಳಿಸುವ ಹೊತ್ತಿಗೆ 6 ಜನರಿಗೆ ಇರಿದಿದ್ದಾನೆ. ಈ ಪೈಕಿ, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.

ದಾಳಿಕೋರನನ್ನು ಕಂಡು ಬೆದರಿದ ವ್ಯಾಪಾರಿಗಳು ದಿಕ್ಕಾಪಾಲಾಗಿ ಓಡುತ್ತಿರುವುದು ಪ್ರತ್ಯಕ್ಷದರ್ಶಿಗಳು ಸೆರೆಹಿಡಿದ ವಿಡಿಯೊದಲ್ಲಿ ಕಂಡುಬಂದಿದೆ.

ಈ ದಾಳಿಯು 2019ರ ಮಾರ್ಚ್‌ನಲ್ಲಿ ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ನಡೆದ ಗುಂಡಿನ ದಾಳಿಯ ಕಹಿ ಘಟನೆಯನ್ನು ನೆನಪಿಸಿತು. ಅದು ನ್ಯೂಜಿಲೆಂಡ್‌ನ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದ್ದು, ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ 51 ಮಂದಿ ಮುಸ್ಲಿಂಮರನ್ನು ಕೊಂದಿದ್ದನು. 40 ಜನರು ತೀವ್ರವಾಗಿ ಗಾಯಗೊಂಡಿದ್ದರು.

‘ಈ ಕೃತ್ಯ ಒಬ್ಬ ವ್ಯಕ್ತಿಯಿಂದ ನಡೆದಿದೆ. ಯಾವುದೇ ನಂಬಿಕೆ, ಸಂಸ್ಕೃತಿ, ಜನಾಂಗಕ್ಕೆ ಸಂಬಂಧಿಸಿದ್ದಲ್ಲ. ಈ ಕೃತ್ಯಗಳ ಜವಾಬ್ದಾರಿಯನ್ನು ಅವನು ಮಾತ್ರ ಹೊರಬೇಕು’ ಪ್ರಧಾನಿ ಹೇಳಿದ್ದಾರೆ.

ದಾಳಿಕೋರನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆತ ಐಸಿಸ್‌ನಿಂದ ಪ್ರೇರಿತನಾಗಿದ್ದು, ಅದು ಹಿಂಸಾತ್ಮಕ ಸಿದ್ಧಾಂತ’ ವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT