ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜ್‌ಶಿರ್‌ ತಾಲಿಬಾನ್‌ ವಶವಾಗಿದ್ದು ಸುಳ್ಳು: ಪ್ರತಿರೋಧ ಪಡೆ

Last Updated 6 ಸೆಪ್ಟೆಂಬರ್ 2021, 13:43 IST
ಅಕ್ಷರ ಗಾತ್ರ

ಕಾಬೂಲ್‌: ಪಂಜ್‌ಶಿರ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂಬ ತಾಲಿಬಾನ್‌ಗಳ ವಾದವನ್ನು ಪ್ರತಿರೋಧ ಪಡೆಯು ಸೋಮವಾರ ನಿರಾಕರಿಸಿದೆ.

’ಪಂಜಶೀರ್ ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳುತ್ತಿರುವ ತಾಲಿಬಾನ್‌ಗಳ ಹೇಳಿಕೆಗಳು ಸುಳ್ಳು. ಹೋರಾಟವನ್ನು ಮುಂದುವರಿಸಲು ಕಣಿವೆಯ ಎಲ್ಲ ವ್ಯೂಹಾತ್ಮಕ ಸ್ಥಳಗಳಲ್ಲಿ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ. ತಾಲಿಬಾನ್ ಮತ್ತು ಅದರ ಮಿತ್ರರ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ನಾವು ಅಫ್ಗಾನಿಸ್ತಾನದ ಜನರಿಗೆ ಭರವಸೆ ನೀಡುತ್ತೇವೆ,‘ ಎಂದು ‘ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ – ಎನ್‌ಆರ್‌ಎಫ್‌’ ಟ್ವೀಟ್ ಮಾಡಿದೆ.

ತಾಲಿಬಾನ್ ಪಡೆಗಳು ಪಂಜಶೀರ್ ಅನ್ನು ಸಂಪೂರ್ಣವಾಗಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿತ್ತು.

ಈ ಕುರಿತು ಮಾಹಿತಿ ನೀಡಿದ್ದ ತಾಲಿಬಾನ್‌ನ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಮತ್ತು ತಾಲಿಬಾನ್‌ನ ವಕ್ತಾರ ಜಬೀವುಲ್ಲಾ ಮುಜಾಹಿದ್, ‘ರಾಷ್ಟ್ರವ್ಯಾಪಿ ಭದ್ರತೆ ಸ್ಥಾಪನೆಯ ನಮ್ಮ ಪ್ರಯತ್ನಗಳು ಫಲಿಸಿವೆ. ಪಂಜ್‌ಶಿರ್‌ ಪ್ರಾಂತ್ಯವನ್ನು ಅಲ್ಲಾ ಮತ್ತು ಜನರ ಬೆಂಬಲದಿಂದ ವಶಕ್ಕೆ ಪಡೆಯಲಾಗಿದೆ,‘ ಎಂದು ಹೇಳಿದ್ದರು. ಈ ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

ಪಂಜ್‌ಶಿರ್‌ ಪ್ರಾಂತ್ಯವು ಕಳೆದ ಏಳು ದಿನಗಳಿಂದ ತಾಲಿಬಾನ್‌ಗೆ ಪ್ರತಿರೋಧ ತೋರುತ್ತಿದೆ. ತಾಲಿಬಾನ್‌ ಮತ್ತು ಪಂಜ್‌ಶಿರ್‌ ಪ್ರತಿರೋಧ ಪಡೆಗಳ ಕಾಳಗದಲ್ಲಿ ಎರಡೂ ಕಡೆ ಸಾವು ನೋವು ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT