ಭಾನುವಾರ, ಮಾರ್ಚ್ 26, 2023
24 °C

ಇಸ್ರೇಲ್: ಉಗ್ರರಿಂದ ರಾಕೆಟ್‌ ದಾಳಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಗಾಜಾ ಸಿಟಿ: ‘ದಕ್ಷಿಣ ಇಸ್ರೇಲ್‌ನ ಕೆಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪ್ಯಾಲೆಸ್ಟಿನ್‌ ಉಗ್ರರು ಶುಕ್ರವಾರ ಗಾಜಾ ಪಟ್ಟಿಯಿಂದ ರಾಕೆಟ್‌ ದಾಳಿ ನಡೆಸಿದ್ದಾರೆ. ಇದು ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ’ ಎಂದು ಇಸ್ರೇಲ್‌ ಸೇನೆಯು ಹೇಳಿದೆ.

‘ಈ ದಾಳಿಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ’ ಎಂದು ಸೇನೆ ತಿಳಿಸಿದೆ.

‘ಈ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು, ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆಸಿವೆ. ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಶಸ್ತ್ರಾಸ್ತ್ರ ತಯಾರಿಕಾ ಘಟಕ, ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಸೇನಾಪಡೆಯು ಮಾಹಿತಿ ನೀಡಿದೆ.

ಹಮಾಸ್‌ ಉಗ್ರ ಸಂಘಟನೆಯು ಗಾಜಾ ಪಟ್ಟಿಯನ್ನು ನಿಯಂತ್ರಿಸುತ್ತದೆ. 

‘ಪ್ಯಾಲೆಸ್ಟೈನ್‌ನಿಂದ ನಡೆಸಲಾಗುವ ಎಲ್ಲಾ ದಾಳಿಗಳಿಗೂ ಇಸ್ರೇಲ್‌, ಹಮಾಸ್‌ ಅನ್ನು ದೂಷಿಸುತ್ತದೆ’ ಎಂದು ಹಮಾಸ್‌ ಸಂಘಟನೆ ದೂರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು