ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ಸಂಘಟನೆ, ಉಗ್ರರ ನಡುವೆ ಸಂಪರ್ಕ: ಇಸ್ರೇಲ್‌ನ ದಾಖಲೆಗಳಲ್ಲಿ ಪುರಾವೆ

Last Updated 6 ನವೆಂಬರ್ 2021, 8:44 IST
ಅಕ್ಷರ ಗಾತ್ರ

ಜೆರುಸಲೇಂ: ಪ್ಯಾಲೆಸ್ಟೀನ್‌ನ ಮಾನವ ಹಕ್ಕುಗಳ ಗುಂಪುಗಳು ಮತ್ತು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ನಡುವೆ ಸಂಪರ್ಕ ಇದೆ ಎಂಬ ಆರೋಪಗಳ ಕುರಿತು ಇಸ್ರೇಲ್‌ನ ಗೌಪ್ಯ ದಾಖಲೆ ಕೆಲ ಪ್ರಬಲ ಪುರಾವೆಗಳನ್ನು ಹೊಂದಿವೆ. ಆದರೆ, ಈ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವಂತೆ ಐರೋಪ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಈ ದಾಖಲೆಗಳು ವಿಫಲವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಸ್ರೇಲ್‌ನ ಶಿನ್‌ ಬೆಟ್‌ ಆಂತರಿಕ ಭದ್ರತಾ ಸೇವಾ ವಿಭಾಗ 74 ಪುಟಗಳ ಈ ದಾಖಲೆಗಳನ್ನು ಸಿದ್ಧಪಡಿಸಿದ್ದು, ಮೇ ತಿಂಗಳಲ್ಲಿ ಐರೋಪ್ಯ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಇವುಗಳನ್ನು ‘+972 ಮ್ಯಾಗಜಿನ್‌’ ಎಂಬ ಆನ್‌ಲೈನ್‌ ನಿಯತಕಾಲಿಕದಿಂದ ಪಡೆದಿರುವುದಾಗಿ ‘ಅಸೋಸಿಯೇಟೆಡ್‌ ಪ್ರೆಸ್‌’ ಸುದ್ದಿಸಂಸ್ಥೆ ತಿಳಿಸಿದೆ.

ಭಯೋತ್ಪಾದಕ ಸಂಘಟನೆಗಳು ಹಾಗೂ ಪ್ಯಾಲೆಸ್ಟೀನ್‌ನ ಮಾನವ ಹಕ್ಕುಗಳ ಗುಂಪುಗಳ ನಡುವಿನ ಸಂಪರ್ಕದ ಬಗ್ಗೆ ಬಹಿರಂಗಪಡಿಸಲಾಗದ ಇನ್ನಷ್ಟು ಪುರಾವೆಗಳು ಇಸ್ರೇಲ್‌ ಬಳಿ ಇರಬಹುದು ಎಂದೂ ಸುದ್ದಿಸಂಸ್ಥೆ ತಿಳಿಸಿದೆ.

ಪ್ಯಾಲೆಸ್ಟೀನ್‌ನ ಆರು ನಾಗರಿಕ ಸಂಸ್ಥೆಗಳನ್ನು ಭಯೋತ್ಪಾದಕ ಗುಂಪುಗಳೆಂದು ಇಸ್ರೇಲ್ ಕಳೆದ ತಿಂಗಳು ಗುರುತಿಸಿದೆ. ಆದರೆ, ಈ ಗುಂಪುಗಳ ವಿರುದ್ಧ ಇಸ್ರೇಲ್ ಇನ್ನೂ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಮತ್ತು ಶಿನ್ ಬೆಟ್ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT