ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಳಿಸಿದ್ದ ಅಂಗವಿಕಲರ ಉಚಿತ ಸೇವೆಯನ್ನು ಈಗ ಮುಂದುವರಿಸಿರುವ ‘ಜೈಪುರ್ ಫೂಟ್’ ಸಂಸ್ಥೆ, ಭಾರತದ 20 ಸ್ಥಳಗಳಲ್ಲಿಉಚಿತ ಅಂಗಾಂಗ ಜೋಡಣೆ ಸೇವೆಯನ್ನು ಪುನರಾರಂಭಿಸಿದೆ.

ಕೋವಿಡ್–19ರಿಂದ ಈ ವರ್ಷದ ಆರಂಭದಲ್ಲೇ ಕೇಂದ್ರದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸಂಸ್ಥೆಯ ಕೇಂದ್ರ ಕಚೇರಿ ಇರುವ ಜೈಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಸ್ಥೆಯ ಚಟುವಟಿಕೆಗಳನ್ನುಬೇಸಿಗೆ ನಂತರ ಮತ್ತೆ ಆರಂಭಿಸಲಾಗಿದೆ. ಪಟ್ನಾದಲ್ಲಿ ಇದೇ ತಿಂಗಳಲ್ಲಿ ಶಾಶ್ವತ ಕೇಂದ್ರ ಆರಂಭವಾಗಲಿದೆ’ ಎಂದು ಅಮೆರಿಕದಲ್ಲಿರುವ ಜೈಪುರ್ ಫೂಟ್ ಸಂಸ್ಥೆ ಅಧ್ಯಕ್ಷ ಪ್ರೇಮ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಕೋಟಾ, ಬಿಕನೇರ್, ಉದಯಪುರ, ಭಾರತ್ಪುರ, ಪಾಲಿ, ಅಜ್ಮೀರ್, ನವದೆಹಲಿ, ಬೆಂಗಳೂರು, ಗುವಾಹಟಿ, ನೋಯ್ಡಾ, ರಾಂಚಿ, ಜೋದ್ಪುರ, ಅಂಬಾಲಾ, ಶ್ರೀನಗರ, ಇಂದೋರ್, ಚೆನ್ನೈ, ಅಹಮದಾಬಾದ್ ಮತ್ತು ವಾರಾಣಸಿಯಲ್ಲಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ ಎಂದು ಅವರು ತಿಳಿಸಿದ್ದಾರೆ.

‘ಸೇವೆಯನ್ನು ಪುನರಾರಂಭಿಸಿರುವಎಲ್ಲ ಕೇಂದ್ರಗಳಲ್ಲೂ, ಸುರಕ್ಷತೆ, ನೈರ್ಮಲ್ಯ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ‘ಜೈಪುರ ಫೂಟ್ ಯುಎಸ್ಎ’ ಸಂಸ್ಥೆಯ ಮೂಲ ಸಂಸ್ಥೆ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿಯ (ಬಿಎಂವಿಎಸ್ಎಸ್) ಸಂಸ್ಥಾಪಕ ಡಿ.ಆರ್. ಮೆಹ್ತಾ ಅವರು ಭರವಸೆ ನೀಡಿರುವುದಾಗಿ ಭಂಡಾರಿ ತಿಳಿಸಿದ್ದಾರೆ.

‘ಕೃತಕ ಅಂಗಾಂಗಳ ಅಗತ್ಯವಿರುವ, ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಕೇಂದ್ರವಾಗಿಟ್ಟುಕೊಂಡು, ಆದ್ಯತೆಯ ಮೇಲೆ ಕೇಂದ್ರಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿರುವ ಅವರು, ‘ಮುಂಬೈ, ಹೈದರಾಬಾದ್ ಮತ್ತು ಲಖನೌದಲ್ಲಿ ಇನ್ನೂ ಮೂರು ಕೇಂದ್ರಗಳನ್ನು ಮತ್ತೆ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.