ಟೋಕಿಯೊ: ಜುಲೈನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಕೊರೊನಾ ವೈರಸ್ ನಿಯಂತ್ರಿಸಲು ಶುಕ್ರವಾರ ಜಪಾನ್‌ನ ಟೊಕಿಯೊ ಮತ್ತು ಇತರ ಮೂರು ಪ್ರಾಂತ್ಯಗಳಿಗೆ ಮೂರನೇ ಬಾರಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರು ಟೋಕಿಯೊ, ಒಸಾಕಾ, ಕ್ಯೂಟೊ ಮತ್ತು ಹ್ಯೋಗೊ ಪ್ರಾಂತ್ಯಗಳಲ್ಲಿ ಏಪ್ರಿಲ್ 25ರಿಂದ ಮೇ 11ರವರಗೆ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಕೋವಿಡ್ –19 ಪ್ರಾರಂಭವಾದ ಬಳಿಕ ಜಪಾನ್ ಮೂರನೇ ಬಾರಿ ತುರ್ತು ಪರಿಸ್ಥಿತಿ ಘೋಷಿಸುತ್ತಿದೆ. ಟೋಕಿಯೊದಲ್ಲಿ ಒಂದು ತಿಂಗಳ ಹಿಂದಷ್ಟೇ ತುರ್ತು ಪರಿಸ್ಥಿತಿ ಮುಕ್ತಾಯವಾಗಿತ್ತು. ಈ ಹಿಂದೆ ಅರೆ ತುರ್ತು ಪರಿಸ್ಥಿತಿ ಕ್ರಮಗಳು ವಿಫಲವಾಗಿದ್ದರಿಂದ ತಜ್ಞವೈದ್ಯರು ಮತ್ತು ಸ್ಥಳೀಯ ನಾಯಕರು ಕಠಿಣ ಕ್ರಮಗಳು ತುರ್ತಾಗಿ ಅಗತ್ಯವಾಗಿವೆ ಎಂದು ಪ್ರತಿಪಾದಿಸಿದ್ದರು.

ಈ ಬಾರಿ ಬಾರ್‌ಗಳು, ಮಾಲ್‌ಗಳು, ಥೀಮ್ ಪಾರ್ಕ್‌ಗಳು, ಅಂಗಡಿಗಳು, ಚಿತ್ರಮಂದಿರ, ವಸ್ತುಸಂಗ್ರಹಾಲಯಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಶಾಲೆಗಳು ಮಾತ್ರ ತೆರೆದಿದ್ದು, ವಿಶ್ವವಿದ್ಯಾಲಯಗಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.