ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಡೆರ್ನಾ ಲಸಿಕೆ: ಮತ್ತೆ ಕಲ್ಮಶ ಪತ್ತೆ

Last Updated 30 ಆಗಸ್ಟ್ 2021, 19:33 IST
ಅಕ್ಷರ ಗಾತ್ರ

ಟೋಕಿಯೊ: ಮೊಡೆರ್ನಾ ಐಎನ್‌ಸಿಸ್‌ ಕೋವಿಡ್‌–19 ಲಸಿಕೆಗಳಲ್ಲಿ ಕಲ್ಮಶಕಂಡುಬಂದಿದ್ದ ಕಾರಣ ಜಪಾನ್‌ ಹಲವಾರು ಡೋಸ್‌ ಲಸಿಕೆಗಳನ್ನು ತಡೆಹಿಡಿದಿತ್ತು. ಈಗ ಆ ಸಮಸ್ಯೆ ಮತ್ತಷ್ಟು ದೊಡ್ಡದಾಗಿದೆ. ಲಸಿಕೆಯ ಹಲವು ತಂಡಗಳಲ್ಲೂ ಕಲ್ಮಶಗಳು ಕಂಡುಬಂದಿರುವ ಮತ್ತು ಇಬ್ಬರು ಮೃತಪಟ್ಟಿರುವ ಕಾರಣ ಸುಮಾರು 10 ಲಕ್ಷ ಲಸಿಕೆಗಳನ್ನು ತಡೆ ಹಿಡಿಯಲಾಗಿದೆ.

ಈವರೆಗೂ ಒಟ್ಟು 26 ಲಕ್ಷ ಡೋಸ್‌ ಲಸಿಕೆಗಳನ್ನು ತಡೆ ಹಿಡಿದಂತಾಗಿದೆ.

ಡೆಲ್ಟಾ ತಳಿಯಿಂದ ಉಂಟಾಗಿರುವ ಅತ್ಯಂತ ಅಪಾಯಕಾರಿ ಕೋವಿಡ್‌ ಅಲೆಯ ಜೊತೆಜಪಾನ್‌ ಹೋರಾಟ ಮಾಡುತ್ತಿರುವಾಗಲೇ ಈ ಬೆಳವಣಿಗೆಗಳು ನಡೆದಿವೆ. ನಿಧಾನ ಗತಿಯ ಲಸಿಕೆ ಅಭಿಯಾನದ ನಡುವೆ ಪ್ರತಿ ದಿನ ಜಪಾನ್‌ನಲ್ಲಿ ಸೋಂಕಿತರ ಸಂಖ್ಯೆ 25,000 ಮೀರುತ್ತಿದೆ.

ಗುನ್ಮ ಮತ್ತು ಓಕಿನಾವ ಪ್ರಾಂತ್ಯದಲ್ಲಿ ಬಳಸಲು ಉದ್ದೇಶಿಸಿದ್ದ ಲಸಿಕೆಯಲ್ಲಿ ಕಲ್ಮಶ ಪತ್ತೆಯಾಗಿದೆ ಎಂದು ಭಾನುವಾರ ವರದಿಯಾಗಿದೆ. ಗುನ್ಮದಲ್ಲಿ ಲಸಿಕೆಯ ಶೀಶೆಯಲ್ಲಿ ಚಿಕ್ಕದಾದ ಕಪ್ಪು ವಸ್ತು ಪತ್ತೆಯಾಗಿದೆ. ಓಕಿನಾವದಲ್ಲಿ ಸಿರಿಂಜ್‌ ಮತ್ತು ಒಂದು ಶೀಶೆಯಲ್ಲಿ ಕಪ್ಪು ವಸ್ತು ಕಂಡಬಂದಿದೆ. ಮತ್ತೊಂದು ಸಿರಿಂಜ್‌ನಲ್ಲಿ ಗುಲಾಬಿ ಬಣ್ಣದ ವಸ್ತು ಕಂಡುಬಂದಿದೆ ಎಂದು ಪ್ರಾಂತ್ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿರಿಂಜ್‌ಗಳನ್ನು ಶೀಶೆಗೆ ಸರಿಯಾದ ಕ್ರಮದಲ್ಲಿ ಹಾಕದಿದ್ದಾಗ ಅಥವಾ ಶೀಶೆಗಳ ರಬ್ಬರ್‌ ಬುರುಡೆಗಳನ್ನು ತೆಗೆಯುವ ಕ್ರಮದಲ್ಲಿ ವ್ಯತ್ಯಾಸವಾಗಿ ಈ ರೀತಿ ಕಲ್ಮಶಗಳು ಕಂಡು ಬಂದಿರಬಹುದು. ಬೇರೆ ಶೀಶೆಗಳಲ್ಲಿರುವ ಲಸಿಕೆಯನ್ನು ಬಳಸಬಹುದು ಎಂದು ಜಪಾನ್‌ ಆರೋಗ್ಯ ಸಚಿವರು ಸೋಮಮವಾರ ಹೇಳಿದ್ದಾರೆ.

ಸುರಕ್ಷತೆ ಮತ್ತು ದಕ್ಷತೆ ಕುರಿತು ಯಾವುದೇ ಅನುಮಾನ ಮೂಡಿಲ್ಲ. ಲಸಿಕೆಗಳನ್ನು ತಡೆ ಹಿಡಿದಿರುವುದು ಮುನ್ನೆಚ್ಚರಿಕಾ ಕ್ರಮವಾಗಿ ಎಂದು ಜಪಾನ್‌ ಸರ್ಕಾರ ಹೇಳಿದೆ. ಲಸಿಕೆಯಲ್ಲಿ ಕಲ್ಮಶ ಇದ್ದ ಕಾರಣ ಸಾವು ಸಂಭವಿಸುವುದಿಲ್ಲ ಎಂದು ಲಸಿಕೆ ಮಾಹಿತಿ ತಂಡದ ಉಪಾಧ್ಯಕ್ಷ ತಾಕಹಿರೊ ಕಿನೊಶಿತ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT