ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಪ್ರಜೆಯೊಡನೆ ಮದುವೆ: ಅರಮನೆಯ ಸ್ಥಾನಮಾನ ಕಳೆದುಕೊಂಡ ಜಪಾನ್ ರಾಜಕುಮಾರಿ

Last Updated 26 ಅಕ್ಟೋಬರ್ 2021, 6:37 IST
ಅಕ್ಷರ ಗಾತ್ರ

ಟೋಕಿಯೊ: ಜಪಾನಿನ ರಾಜಕುಮಾರಿ ಮಾಕೊ ಅವರು ಸಾಮಾನ್ಯ ವ್ಯಕ್ತಿಯವನ್ನು ವಿವಾಹವಾದ ಕಾರಣ, ರಾಜಮನೆತನದ ಸ್ಥಾನಮಾನಗಳನ್ನು ಮಂಗಳವಾರ ಕಳೆದುಕೊಂಡರು.

ಮಾಕೊ ಮತ್ತು ಕೀ ಕೊಮುರೊ ಅವರ ವಿವಾಹದ ದಾಖಲೆಯನ್ನು ಅರಮನೆಯ ಅಧಿಕಾರಿಯೊಬ್ಬರು ಮಂಗಳವಾರ ಬೆಳಿಗ್ಗೆ ಸಲ್ಲಿಸಿದ್ದಾರೆ ಎಂದು ಇಂಪೀರಿಯಲ್ ಹೌಸ್‌ಹೋಲ್ಡ್ ಏಜೆನ್ಸಿ ತಿಳಿಸಿದೆ.

ದಂಪತಿಯ ಮದುವೆಗೆ ಸಂಬಂಧಿಸಿದಂತೆ ಯಾವುದೇ ಔತಣಕೂಟ ಮತ್ತು ಆಚರಣೆಗಳು ಇರುವುದಿಲ್ಲ. ಅವರ ಮದುವೆಯನ್ನು ಅನೇಕ ಜನರು ಆಚರಿಸುವುದಿಲ್ಲ ಎಂದು ಏಜೆನ್ಸಿ ಹೇಳಿದೆ.

30ರ ವಯಸ್ಸಿನ ಮಾಕೊ, ಚಕ್ರವರ್ತಿ ನರುಹಿಟೊ ಅವರ ಸೊಸೆ. ಟೋಕಿಯೊದ ಇಂಟರ್‌ನ್ಯಾಷನಲ್‌ ಕ್ರಿಶ್ಚಿಯನ್‌ ಯುನಿವರ್ಸಿಟಿಯಲ್ಲಿ ಮಾಕೊ ಮತ್ತು ಕೀ ಕೊಮುರೊ ಸಹಪಾಠಿಗಳಾಗಿದ್ದರು. 2017ರಲ್ಲಿಯೇ ಅವರು ಮುಂದಿನ ವರ್ಷ ವಿವಾಹವಾಗಲು ಉದ್ದೇಶಿಸಿರುವುದಾಗಿ ಘೋಷಿಸಿದ್ದರು. ಆದರೆ ಹಣಕಾಸು ವ್ಯವಹಾರ ಸಂಬಂಧಿತ ಬಿಕ್ಕಟ್ಟಿನಿಂದಾಗಿ ಮದುವೆಯಾಗುವುದು ವಿಳಂಬವಾಗಿತ್ತು.

ಮಾಕೊ ಅವರು ಮಂಗಳವಾರ ಬೆಳಿಗ್ಗೆ ತೆಳು ನೀಲಿ ಬಣ್ಣದ ಬಟ್ಟೆ ಧರಿಸಿ ಹೂಗುಚ್ಛ ಹಿಡಿದು ಅರಮನೆಯಿಂದ ನಿರ್ಗಮಿಸಿದರು. ಅವರು ನಿವಾಸದ ಹೊರಗೆ ತನ್ನ ಪೋಷಕರಾದ ರಾಜ ಅಕಿಶಿನೊ ಮತ್ತು ರಾಣಿ ಕಿಕೊ ಮತ್ತು ಸಹೋದರಿ ಕಾಕೊ ಅವರಿಗೆ ನಮಸ್ಕರಿಸಿದಳು. ಬಳಿಕ ಸಹೋದರಿಯರು ಒಬ್ಬರನ್ನೊಬ್ಬರು ಆಲಿಂಗಿಸಿದರು.

ಇಂಪೀರಿಯಲ್ ಹೌಸ್ ಕಾನೂನು ಪುರುಷ ಉತ್ತರಾಧಿಕಾರವನ್ನು ಮಾತ್ರ ಅನುಮತಿಸುತ್ತದೆ. ರಾಜಮನೆತನದ ಸ್ತ್ರೀ ಸದಸ್ಯರು ಸಾಮಾನ್ಯರನ್ನು ವಿವಾಹವಾದಾಗ ಅವರು ತಮ್ಮ ರಾಜಮನೆತನದ ಸ್ಥಾನಮಾನವನ್ನು ತ್ಯಜಿಸಬೇಕಾಗುತ್ತದೆ.

ವರದಕ್ಷಿಣೆ ತಿರಸ್ಕಾರ: ತಾವು ಮದುವೆಯಾಗುವ ವ್ಯಕ್ತಿ ಸಾಮಾನ್ಯ ಪ್ರಜೆ ಎಂಬ ಕಾರಣಕ್ಕೆ ಭಾರಿ ಟೀಕೆ ವ್ಯಕ್ತವಾದ ಕಾರಣ ಮಾಕೊ ಅವರು ತಮಗೆ ಅರಮನೆಯಿಂದ ಸಿಗಬೇಕಿದ್ದ 12.3 ಲಕ್ಷ ಡಾಲರ್‌ (1.40 ಕೋಟಿ ಯೆನ್‌) ವರದಕ್ಷಿಣೆಯನ್ನೂ ತಿರಸ್ಕರಿಸಿದ್ದಾರೆ. 2ನೇ ಮಹಾಯುದ್ಧದ ಬಳಿಕ ಇದೇ ಪ್ರಥಮ ಬಾರಿಗೆ ರಾಜಮನೆತನದ ವ್ಯಕ್ತಿಯೊಬ್ಬರು ವರದಕ್ಷಿಣೆಯಿಂದ ದೂರ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT