ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವ್ಯಾಪಾರ ನೀತಿ ಸಲಹಾ ಸಮಿತಿಗೆ ಇಬ್ಬರು ಭಾರತೀಯರನ್ನು ನೇಮಿಸಿದ ಬೈಡೆನ್

ರೇವತಿ ಅದ್ವೈತಿ ಹಾಗೂ ಮನೀಶ್‌ ಬಾಪ್ನಾ ನೇಮಕ
Last Updated 11 ಮಾರ್ಚ್ 2023, 5:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ವ್ಯಾಪಾರ ನೀತಿ ಮತ್ತು ಸಮಾಲೋಚನೆಯ ಸಲಹಾ ಸಮಿತಿಗೆ ಭಾರತೀಯ ಮೂಲದ ಇಬ್ಬರನ್ನು ಅಧ್ಯಕ್ಷ ಜೋ ಬೈಡೆನ್‌ ಅವರು ನೇಮಕ ಮಾಡಿದ್ದಾರೆ.

ಫ್ಲೆಕ್ಸ್‌ ಕಂಪನಿಯ ಸಿಇಒ ರೇವತಿ ಅದ್ವೈತಿ ಹಾಗೂ ನ್ಯಾಚುರಲ್‌ ರಿಸೋರ್ಸ್‌ ಡಿಫೆನ್ಸ್‌ ಕೌನ್ಸಿಲ್‌ನ ಸಿಇಒ ಮನೀಶ್‌ ಬಾಪ್ನಾ ಅವರನ್ನು ನೇಮಕ ಮಾಡಲಾಗಿದೆ.

ಈ ಸಲಹಾ ಸಮಿತಿಗೆ 14 ಮಂದಿಯನ್ನು ನೇಮಕ ಮಾಡುವ ತನ್ನ ನಿರ್ಧಾರವನ್ನು ಶುಕ್ರವಾರ ಅವರು ಘೋಷಣೆ ಮಾಡಿದ್ದಾರೆ. 14 ಮಂದಿಯ ಪೈಕಿ ಈ ಇಬ್ಬರು ಸ್ಥಾನ ಪಡೆದಿದ್ದಾರೆ

ಈ ಸಮಿತಿಯು ಅಮೆರಿಕದ ವ್ಯಾಪಾರ ನೀತಿಯ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದ ವಿಷಯಗಳ ಕುರಿತು ಸಲಹೆ ನೀಡಲಿದೆ.

ವ್ಯಾಪಾರ ಒ‍ಪ್ಪಂದಕ್ಕೂ ಮುನ್ನ ಸಂಧಾನ ಉದ್ದೇಶಗಳು, ಒಪ್ಪಂದಿಂದ ಆಗುವ ಪರಿಣಾಮಗಳು ಹಾಗೂ ಒಪ್ಪಂದ ಬಳಿಕ ಎದುರಾಗುವ ಅಭಿವೃದ್ಧಿ, ಅನುಷ್ಠಾನ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಸಲಹೆ ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT