ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಆಡಳಿತ ಜಾರಿಗೊಳಿಸಿದ್ದ ನಿಯಮ ರದ್ದುಗೊಳಿಸುವ ಮಸೂದೆಗೆ ಬೈಡನ್‌ ಅಂಕಿತ

Last Updated 1 ಜುಲೈ 2021, 10:49 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೈಗೊಂಡಿದ್ದ ಹಲವು ನಿರ್ಧಾರಗಳನ್ನು ರದ್ದುಗೊಳಿಸುವ ಮೂರು ಪ್ರತ್ಯೇಕ ಕಾನೂನುಗಳಿಗೆ ಅಧ್ಯಕ್ಷ ಜೋ ಬೈಡನ್‌ ಅವರು ಸಹಿ ಹಾಕಿದ್ದಾರೆ.

ಸಾಲ ನೀಡುವವರು ಗ್ರಾಹಕರಿಗೆ ಹೆಚ್ಚು ಬಡ್ಡಿಯನ್ನು ವಿಧಿಸುವುದನ್ನು ತಡೆಯುವ ಕಾಯ್ದೆ, ತೈಲ ಮತ್ತು ಅನಿಲಬಾವಿ ಕೊರೆಯುವುದರಿಂದ ಉಂಟಾಗುತ್ತಿರುವ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಕಾಯ್ದೆ ಮತ್ತು ಸಮಾನ ಉದ್ಯೋಗಾವಕಾಶ ಆಯೋಗದಿಂದ ಕ್ಲೇಮುಗಳ ವಿಲೇವಾರಿಗೆ ಸಂಬಂಧಿಸಿದ ನಿಯಮಗಳನ್ನು ಅಂತ್ಯಗೊಳಿಸುವ ಕಾಯ್ದೆಯ ರದ್ದತಿಗೆ ಬೈಡನ್‌ ಅವರು ಸಹಿ ಹಾಕಿದ್ದಾರೆ.

ಮೂರು ಪ್ರತ್ಯೇಕ ಕಾನೂನುಗಳಿಗೆ ಸಹಿ ಹಾಕುವುದಕ್ಕೂ ಮುನ್ನ ಮಾತನಾಡಿದ ಅವರು, ‘ಈ ಕ್ರಮ ಜನಸಾಮಾನ್ಯರ ಉಳಿತಿಗೆ ಸಂಬಂಧಿಸಿದ ನಮ್ಮ ಬದ್ಧತೆಯನ್ನು ತೋರಿಸುತ್ತದೆ’ ಎಂದು ಹೇಳಿದರು. ಈ ವೇಳೆ ಹಲವು ಸಂಸದರು ಉಪಸ್ಥಿತರಿದ್ದರು.

ಈ ಮಸೂದೆಗಳನ್ನು ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್‌ ಅಂಗೀಕರಿಸಿದವು. ಈ ಕಾಯ್ದೆಯು ಅಲ್ಪಾವಧಿಗೆ ಜಾರಿಯಲ್ಲಿರುವ ಕೆಲವು ನಿಯಮಗಳನ್ನು ರದ್ದುಗೊಳಿಸಲು ಅವಕಾಶ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT