ಮಂಗಳವಾರ, ಜುಲೈ 27, 2021
26 °C

ರಾಣಾ ಪ್ರಕರಣ: ಜುಲೈ 15ರೊಳಗೆ ಹೆಚ್ಚುವರಿ ದಾಖಲೆ ಸಲ್ಲಿಸಲು ಸೂಚನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಾಸ್ ಏಂಜಲೀಸ್ (ಎಪಿ): ಮುಂಬೈ ಭಯೋತ್ಪಾದನಾ ದಾಳಿಯ (2008) ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಪ‍್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರೊಳಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಪ್ರತಿವಾದಿ ವಕೀಲರು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಆದೇಶಿಸಿದ್ದಾರೆ.

ಅಲ್ಲಿಯವರೆಗೂ ರಾಣಾನನ್ನು ಫೆಡರಲ್‌ ಕಸ್ಟಡಿಯಲ್ಲಿಯೇ ಇರಿಸಲು ಸೂಚನೆ ನೀಡಲಾಗಿದೆ.

ರಾಣಾ, ಪಾಕಿಸ್ತಾನಿ–ಅಮೆರಿಕನ್‌ ಹಾಗೂ ಎಲ್‌ಇಟಿ ಭಯೋತ್ಪಾದಕನಾಗಿರುವ ಡೇವಿಡ್ ಕೋಲ್ಮೆನ್ ಹೆಡ್ಲಿಯ ಬಾಲ್ಯದ ಗೆಳೆಯ. 166 ಜನರನ್ನು ಬಲಿ ಪಡೆದ ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಹೆಡ್ಲಿಗೆ ನೆರವಾಗಿದ್ದ ಎಂಬ ಆರೋಪ ರಾಣಾ ಮೇಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು