ಶನಿವಾರ, ಜನವರಿ 16, 2021
24 °C

ಇಂಡೊನೇಷ್ಯಾದಲ್ಲಿ ಭಾರಿ ಮಳೆ: ಭೂ ಕುಸಿತದಲ್ಲಿ 11 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತಾ: ಇಂಡೊನೇಷ್ಯಾದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಭೂ ಕುಸಿತ ಸಂಭವಿಸಿದೆ. ಇದರಲ್ಲಿ 11 ಜನ ಮೃತಪಟ್ಟಿದ್ದು, 18 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಸುಮೇದಾಂಗ್‌ ಜಿಲ್ಲೆಯ ಸಿಂಚಾನುಜುಂಗ ಗ್ರಾಮದಲ್ಲಿ ಎರಡು ಕಡೆ ಭೂ ಕಸಿತ ಸಂಭವಿಸಿದೆ. ಸದ್ಯ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಘಟಕದ ವಕ್ತಾರ ಮಾಹಿತಿ ನೀಡಿದರು.

‘ಶನಿವಾರ ರಾತ್ರಿ ವೇಳೆಗೆ ಮಳೆ ನಿಂತಿತ್ತು. ಆದರೆ ಭೂ ಕುಸಿತದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಅಧಿಕಾರಿಗಳು ರಸ್ತೆ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು